ಜೋಗಿಮಟ್ಟಿ ಗೆಳೆಯರ ಬಳಗದಿಂದ ರಾಜ್ಯೋತ್ಸವ

 ಚಿತ್ರದುರ್ಗ. ನ.೨೯; ಜೋಗಿಮಟ್ಟಿ ಗೆಳೆಯರ ಬಳಗದ ವತಿಯಿಂದ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪುನೀತ್ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ  ಶಾಸಕರಾದ ತಿಪ್ಪಾರೆಡ್ಡಿಯವರು ಭಾಗವಯಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಜೋಗಿಮಟ್ಟಿ ಗೆಳೆಯರ ಬಳಗವು ನಾಡು, ನುಡಿ ಅಷ್ಟೇ ಅಲ್ಲದೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಕನ್ನಡ ರಾಜ್ಯೋತ್ಸವ ನಿಮಿತ್ತ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದೆ ಪುನಿತ್ ನುಡಿಮನದಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಪ್ರಯುಕ್ತ ರಕ್ತದಾನ ಮತ್ತು ನೇತ್ರದಾನದಂತ ಉತ್ತಮ ಕಾರ್ಯಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇವರ ಈ ಉತ್ತಮ ಕಾರ್ಯಗಳು ಹೀಗೆ ಮುಂದುವರೆಲಿ ಎಂದು ಆಶೀಸುವೆ ಅದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು.ಸಮಾರಂಭದಲ್ಲಿ  ಸಿದ್ದೇಶ್  ಕುಮಾರ್, ಪತ್ರಕರ್ತರಾದ ನವೀನ್, ಮಾಲತೇಶ್ ಅರಸ್, ಭಾಗಿಯಾಗಿದ್ದರು. ಮತ್ತು ಜೋಗಿಮಟ್ಟಿ ಗೆಳೆಯರ ಬಳಗದ ಅಧ್ಯಕ್ಷರಾದ ಗರಡಿ ತಿಪ್ಪೇಶ್, ಕಾರ್ಯಾಧ್ಯಕ್ಷರಾದ ರವಿ ಕುಮಾರ್, ಉಪಾಧ್ಯಕ್ಷರಾದ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್, ಕಾರ್ಯದರ್ಶಿಗಳಾದ ಉಲ್ಲಾಸ್, ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ್, ಖಜಾಂಚಿಗಳಾದ ಎಂಜಾರಪ್ಪ ಸದಸ್ಯರುಗಳಾದ ಅನಿಲ್ ಕುಮಾರ್ ಡಿ.ಎಸ್, ಪಾಟೀಲ್, ನವೀನ್, ನೇಮಿಚಂದ್ರ, ವಿಜಯ್, ಸುನೀಲ್, ಗಿರೀಶ್ ಇನ್ನಿತರರು ಭಾಗಿಯಾಗಿದ್ದರು.