ಜೋಗಿನಗೆ ಸಿಎಂ ಬಂಗಾರದ ಪದಕ ಪ್ರದಾನ

ಬಾದಾಮಿ,ಏ3: ಇಲ್ಲಿನ ಜೋಗಿನ ಕುಟುಂಬ ದಕ್ಷ ಡಿವೈಎಸ್ಪಿ ಅಧಿಕಾರಿ ಗೋಪಾಲ ಡಿ. ಜೋಗಿನ ಕಳೆದ ಎರಡು ದಶಕಗಳಿಂದ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಬಡ್ತಿ ಹೊಂದಿ ಸಲ್ಲಿಸಿರುವ ಗಣನೀಯ ಸೇವೆಗೆ ನೀಡಲಾಗಿರುವ 2020 ರ ಸಾಲಿನ ಮುಖ್ಯಮಂತ್ರಿಗಳ ಸ್ವರ್ಣ ಪದಕವನ್ನು ಇತ್ತಿಚೇಗೆ ಬೆಂಗಳೂರಿನಲ್ಲಿ ಸ್ವೀಕರಿಸಿದ್ದಾರೆ.
ಇವರು ರವಿವಾರ(ಏ.2) ಬೆಂಗಳೂರಿನಲ್ಲಿ ನಡೆದ ಮುಖ್ಯಂತ್ರಿಗಳ ಪದಕ ವಿತರಣಾ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಸ್ವರ್ಣ ಪದಕವನ್ನು ಸ್ವೀಕರಿಸಿದ್ದಾರೆ. ಇವರಿಗೆ ಬಾದಾಮಿ ತಾಲೂಕಿನ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.