ಜೋಗಪ್ಪನ ಗುಡಿ ನಿವಾಸಿಗಳಿಗೆ ಫುಡ್ ಕಿಟ್ ವಿತರಣೆ

ಜಗಳೂರು.ಜೂ.೯; ಕೊರೋನಾ ಸಂಕಷ್ಟದಲ್ಲಿ ಬಡವರಿಗೆ ನೆರವಾಗುವ ಮೂಲಕ ಇದ್ದ ಸೌಲಭ್ಯದೊಳಗೆ ಎಲ್ಲರಿಗೂ ಹಂಚಿ ತಿನ್ನುವುದು ನಿಜವಾದ ಮನುಷ್ಯ ಧರ್ಮ ಅಂತಹ ಸಾಮಾಜಿಕ ಕಳಕಳಿ ಹೊಂದಿರುವ ಬಿ.ಲೋಕೇಶ್ ಅವರ ಸೇವೆ ಮೆಚ್ಚುವಂತದ್ದು ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಹೇಳಿದರು.ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕ ವತಿಯಿಂದ ಜೋಗಪ್ಪನ ಗುಡಿ ನಿವಾಸಿಗಳ 30 ಕುಟುಂಬಗಳಿಗೆ ಆಹಾರ ಫುಡ್ಕಿಟ್ ವಿತರಿಸಿ ಮಾತನಾಡಿದರು ಕೊರೋನಾ ಲಾಕ್ ಡೌನ್ ನಿಂದಾಗಿ ಸಾಕಷ್ಟು ಜನ ಸಂಕಷ್ಟದಲ್ಲಿ ಇದ್ದಾರೆ ಅಂತವರನ್ನ ಗುರುತಿಸಿ ನಮ್ಮ ಕೈಲಾದ ಸಮಾಯ ಮಾಡಬೇಕು ಹಾಗು ಸರ್ಕಾರದ ವತಿಯಿಂದ ಸಿಗಬಹುದಾದ ಸವಲತ್ತುಗಳನ್ನ ಕೊಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದರು ಎಸ್.ಟಿ ಘಟಕ ತಾಲ್ಲೂಕು ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿ ನಮ್ಮ ಕೈಯಲ್ಲಿ ಯಾವುದೇ ಅದಿಕಾರ ಇಲ್ಲದೆ ಇರಬಹದು ಆದರೆ ಮತ್ತೊಬ್ಬರಿಗೆ ಸಹಾಯಕ್ಕೆ ನೆರವಾಗುವ ಗುಣ ಬೆಳಸಿಕೊಂಡಿದ್ದಾನೆ ನನ್ನ ಕೈಲಾದ ಸೇವೆ ಮಾಡುವ ಮೂಲಕ  ನೊಂದವರಿಗೆ ನೆರವು ನೀಡೋಣ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹಾಗು ಎಸ್.ಟಿ ಘಟಕ ರಾಜ್ಯಾಧ್ಯಕ್ಷರ ಸಲಹೆ ಸಹಕಾರದೊಂದಿಗೆ ಇನ್ನು ಹಲವು ಬಡಕುಟುಂಬಗಳಿಗೆ ವಿತರಿಸಲಾಗುವುದು ಎಂದರುಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮದ್ದ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮಹಮದ್ ಆಲಿ ಗ್ರಾ.ಪಂ‌.ಸದಸ್ಯ ಚಿಕ್ಮಮ್ಮನಹಟ್ಟಿ ಮಂಜಣ್ಣ .ಕಾಟಪ್ಪ .ಗುಹೇಶ್ವರ  ಇದ್ದರು.