ಜೋಗದ ಮಠದಲ್ಲಿ ಸಾಮೂಹಿಕ ವಿವಾಹ ಸಂಸದ ಅನಂತಕುಮಾರ ಹೆಗಡೆ ಭಾಗಿ


ಸಂಜೆವಾಣಿ ವಾರ್ತೆ
ಸಂಡೂರು, ಫೆ.23: ಉತ್ತರಕನ್ನಡ ಸಂಸದ ಅನಂತ ಕುಮಾರ ಹೆಗಡೆ ಗುರುವಾರ ಸಂಡೂರು ತಾಲೂಕಿನ ದೇವರಕೊಳ್ಳದ ಜೋಗದ ಮಠಕ್ಕೆ ಭೇಟಿ ನೀಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹಂಪಿ ಹಾಗೂ ಸುತ್ತಲ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು, ಧಾರ್ಮಿಕ ಸ್ಥಳಗಳನ್ನು ಪರಿಶೀಲಿಸುವುದು ಸೇರಿದಂತೆ ಧಾರ್ಮಿಕ ಮುಖಂಡರೊಂದಿಗೆ ವಿಶೇಷ ಸಂಪರ್ಕ ಸಾಧಿಸಿರುವ ಸಂಸದ ಅನಂತಕುಮಾರ ಹೆಗಡೆ ಜೋಗದ ಮಠದ ಶ್ರೀರಾಜಭಾರತಿ ಸ್ವಾಮಿಗಳನ್ನು(ಜೋಗದ ತಾತ) ಇತ್ತೀಜೆಗೆ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ತಿಳಿಸಿದಂತೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನೀಡಿದ ಆಹ್ವಾನದಂತೆ ಗುರುವಾರ ಭೇಟ ದೇವತಾ ಕಾರ್ಯ ಹಾಗೂ ಶ್ರೀಗಳ ಆರ್ಶಿವಾದ ಪಡೆದರು.
ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯ ಚಂದ್ರಕಾಂತ ಕಾಮತ್, ಕಟಗಿ ರಾಮಕೃಷ್ಣ, ಕೆ.ವೀರೇಶ್, ಪ್ರದೀಪ ಸೇರಿದಂತೆ ಇತರರು ಪಾಲ್ಗೊಂಡು ನೂತನ 25 ಜೋಡಿ ವಧು-ವರರಿಗೆ ಹಾರೈಸಿದರು.