ಜೋಕುಮಾರಸ್ವಾಮಿ ಬಂದ

ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.22:: ಗಣೇಶ ಹೋದ ನಂತರ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂದೇ ಜನಪದರ ನಂಬಿಕೆ. ಗಣೇಶ ಸವಿಸವಿಯಾದ ಭೋಜನ ಸವಿದು ಹೋದರೆ ಜೋಕಮಾರಸ್ವಾಮಿಗೆ ನುಚ್ಚು ಪುಂಡಿಪಲ್ಯ ಕಟಕು ರೊಟ್ಡಿ.ಮೆಣಸಿನಕಾಯಿ ಉಪ್ಪು ಇವೇ ನೈವೇದ್ಯ ಮನೆ ಮನೆಗೆ ಸುತ್ತಿ ಜನರು ಪಡುವ ಕಷ್ಟಗಳನ್ನು ನೋಡಿ ಅವುಗಳನ್ನು ಶಿವನಿಗೆ ತಿಳುಸುತ್ತಾನೆ ಜೋಕುಮಾರ ಸ್ವಾಮಿ ಹೋದ ನಂತರ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ.
ಜೋಕುಮಾರನ್ಮು ಬೇವಿನತಪ್ಪಲ ತುಂಬಿದ ಬುಟ್ಟಿಯಲ್ಲಿಟ್ಡುಕೊಂಡು ಮನೆ ಮನೆಗೆ ತೆರಳಿ ಜೋಕುಮಾರ ಬಂದಾಗ ಜೋಕಾಮಾರಾ ಎಂದು ಜೋಕಮಾರ ಗುಣಗಾನದ ಹಾಡು ಹಾಡುವ ಮಹಿಳೆಯರು ಜನರಿಂದ ನೈವೇದ್ಯ ಪಡೆದು.ಬೇವಿನ ಎಲೆಯಲ್ಲಿ ಕಾಡಿಗೆ(ಕಪ್ಪು)ನೀಡುತ್ತಾರೆ ಅದನ್ನು ಜಮೀನನಲ್ಲಿ ಹೊಳಿದರೆ ಉತ್ತಮ ಫಸಲು ನೀಡುತ್ತದೆ. ಮಕ್ಕಳು ಹಣೆಗೆ ಹಚ್ಚಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬುದು ನಂಬಿಕೆ ಹೀಗೆ ಏಳುದಿನಗಳವರೆಗೆ ಊರು ಸುತ್ತುವ ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ ಹುಣ್ಣೆಮೆ ಹಿಂದಿನ ರಾತ್ರಿ ಜೋಕುಮಾರನ  ತಲೆ ಒಡೆದು ಹಳ್ಳಿದಲ್ಲಿ ಇಡುವ ಪದ್ದತಿ ಇದೆ ಜೋಕುಮಾರ ಸ್ಬಾಮಿಯ ಆಚರಣೆ ಗಂಗಾವತಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈಗಲೂ ಆಚರಣೆ ಮುಂದುವರೆಯಿಸಿಕೊಂಡು ಬರಲಾಗಿದೆ ಎಂದು ಲಕ್ಷ್ಮೀದೇವಿ ಈ ಸಂದರ್ಭದಲ್ಲಿ ಗಂಗಮ್ಮ ಮಹಾದೇವಿ ಸಾವಿತ್ರಿ ದೀಪಾ ಶಾರದ ಸೇರಿದಂತೆ ಇತರರು ಇದ್ದರು