ಜೋಕರ್ ಗಳಂತೆ ವರ್ತಿಸುತ್ತಿರುವ ಅಧಿಕಾರಿಗಳು; ಕಾಂಗ್ರೆಸ್ ಆರೊಪ

ದಾವಣಗೆರೆ.ಏ.೨೨; ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ದಾವಣಗೆರೆಯಲ್ಲಿ ಕೋರೊನಾ ವಿಚಾರದಲ್ಲಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ಮಾಸ್ಕ್ ಬಗ್ಗೆ ಜಾಗೃತಿ ಮಾಡುವುದು ಮುಖ್ಯ ಆದರೆ ಅದೊಂದೆ ಕಾರಣದಿಂದ ಪ್ರತಿನಿತ್ಯ ಪ್ರಚಾರ ಪಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಮಾಜಿ ಅಧ್ಯಕ್ಷ ಸುಭಾಷ್ ಚಂದ್ರ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ದಾವಣಗೆರೆಯಲ್ಲಿ ಕಳೆದ ಕೆಲದಿಂದ ಪ್ರತಿನಿತ್ಯ ಮಾಸ್ಕ್ ವಿಚಾರವಾಗಿ ಅಧಿಕಾರಿಗಳು ಜೋಕರ್ ಗಳಂತೆ ವರ್ತಿಸುತ್ತಿದ್ದಾರೆ. ಮಾಸ್ಕ್ ವಿಚಾರ ಬಿಟ್ಟು ಜಿಲ್ಲೆಯಲ್ಲಿ ಆಕ್ಸಿಜನ್ ಎಷ್ಟಿದೆ,ಬೆಡ್ ಗಳು ಬಗ್ಗೆ ಮಾಹಿತಿ ನೀಡಬೇಕು.ಮುಖ್ಯವಾಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಆದರೆ ಜಿಲ್ಲಾಧಿಕಾರಿ ಹಾಗೂ ರಕ್ಷಣಾಧಿಕಾರಿಗಳು ಅದನ್ನು ಬಿಟ್ಟು ರಸ್ತೆಗಿಳಿದು ಮಾಸ್ಕ್ ಹಾಕುವಂತೆ ಹೇಳುವುದು ಸರಿಯಲ್ಲ ಅವರ ಕೆಲಸ ಅದಲ್ಲ.ಖಾಸಗಿ ಆಸ್ಪತ್ರೆಗಳು ಕೋವಿಡ್ ೨ ನೇ ಅಲೆ ಹಿನ್ನೆಲೆಯಲ್ಲಿ ಯಾವ ಸಿದ್ದತೆ ಮಾಡಿಕೊಂಡಿವೆ.ಮುAಜಾಗ್ರತಾ ಕ್ರಮ ವಹಿಸಿವೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾದಂತೆ ದಾವಣಗೆರೆ ಜಿಲ್ಲಾಡಳಿತವೂ ಸಹ ವಿಫಲವಾಗಿದೆ ಎಂದು ಆರೋಪಿಸಿದರು.ಅಧಿಕಾರಿಗಳಿಗೆ ಮಾಡಬೇಕಾದ ಕೆಲಸಗಳು ಸಾಕಷ್ಟು ಇದೆ ಆದರೆ ಅವರುಗಳು ಅದನ್ನು ಬಿಟ್ಟು ಸಂಘಸAಸ್ಥೆಗಳು, ಕನ್ನಡಪರ ಸಂಘಟನೆಗಳು ಮಾಡುವಂತೆ ರಸ್ತೆಗಿಳಿದು ಮಾಸ್ಕ್ ಬಗ್ಗೆ ಹೇಳುವುದು ಒಂದು ರೀತಿ ನಾಟಕವಾಡುವಂತೆ ಜನತೆಗೆ ಭಾಸವಾಗುತ್ತಿದೆ ಆದ್ದರಿಂದ ಜಿಲ್ಲಾಧಿಕಾರಿಗಳು ಈ ರೀತಿ ಮಾಡುವುದು ಬಿಟ್ಟು ತಮ್ಮ ವ್ಯಾಪ್ತಿಯ ಕೆಲಸ ಮಾಡಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ನ ಕಾರ್ಮಿಕ,ವಕೀಲ ಹಾಗೂ ಸಾಂಸ್ಕೃತಿಕ ಘಟಕದಿಂದ ಜಿಲ್ಲಾಧಿಕಾರಿಗೆ ಘೇರಾವ್ ಹಾಕಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಚಂದ್ರಶೇಖರ್, ಕೃಷ್ಣನಾಯ್ಕ್,ಕಡತಿ ತಿಪ್ಪೇಶ್, ಸಂತೋಷ್ ನಾಯ್ಕ್,ನಾಗರಾಜ್, ಸಣ್ಣರಾಜು ಇದ್ದರು.