ಜೈ ಹನುಮಾನ ಜಯಂತೋತ್ಸವ ನಿಮಿತ್ತ ವಿವಿಧ ಪೂಜೆ

ಕಲಬುರಗಿ:ಏ.24: ಜೈ ಹನುಮಾನ ದೇವಸ್ಥಾನ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸರ್ವೋದಯ ನಗರ ಹಾಗೂ ಹೌಸಿಂಗ ಬೊರ್ಡ ಕಾಲನಿ ಮತ್ತು ಉಜ್ವಲ ಹೌಸಿಂಗ ಕಾಲೋನಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಜೈ ಹನುಮಾನ ಜಯಂತೋತ್ಸವ ಕಾರ್ಯಕ್ರಮ ನಿಮಿತ್ತ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಪರ್ತಕರ್ತ ಶಂಕರ ಕೋಡ್ಲಾ ಅವರು ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್‍ನ್ ಅಧ್ಯಕ್ಷ ಸಾಯಬಣ್ಣಾ ಎಂ. ಹೋಳ್ಕರ್ ಅವರು ಮಾತನಾಡುತ್ತಾ ಮಂಗಳವಾರ ಮುಂಜಾನೆ 7-00 ಗಂಟೆಗೆ ಜೈ ಹನುಮಾನ ರುದ್ರಾಭಿಷೇಕ ಹಾಗೂ ಪೂಜಾ ವಿಧಿ ವಿಧಾನದೊಂದಿಗೆ ಅಮೃತ ಘಳಿಗೆಯಲ್ಲಿ ಶಿವಕುಮಾರ ಈರನಗುಡಿ ಸ್ವಾಮಿ ಇವರ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆ ಕೈಂಕರ್ಯ ರಾಜೇಶ್ವರಿ ಮತ್ತು ರವಿಕುಮಾರ ಮಿಡ್ಡೆ ಇವರಿಂದ ತೊಟ್ಟಿಲ ಕಾರ್ಯಕ್ರಮವನ್ನು ಮುಂಜಾನೆ 8-00 ಗಂಟೆಗೆ ನೆರವೇರಿವತು.
ಜೈ ಹನುಮಾನ ಜಯಂತಿಯು ಸತತವಾಗಿ 32 ವರ್ಷಗಳಿಂದ ಯಾವುದೇ ಜಾತಿ ಮತ ಧರ್ಮ ಭೇದ ಭಾವ ಇಲ್ಲದೆ ಬಡಾವಣೆಯ ಎಲ್ಲಾ ಸಮುದಾಯದ ಜನರನ್ನು ಕೂಡಿಸಿಕೊಂಡು ನಮ್ಮ ಟ್ರಸ್ಟಿನ ನೇತೃತ್ವದಲ್ಲಿ ಹನುಮಾನ ಜಯಂತಿಯನ್ನು ಹಾಗೂ ಧಾಮಿಕ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದಿರುತ್ತದೆ. ನಮ್ಮ ಬಡಾವಣೆಯು ಕಲಬುರಗಿಯಲ್ಲಿ ಮಾದರಿ ಬಡಾವಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ರವಿಂದ್ರ ಹೋನ್ನಳ್ಳಿ, ಕ.ರಾ.ಸ.ಅ.ಸ. ಪಜಾ ಮತ್ತು ಪಪಂ. ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಪಿ. ಹುಬ್ಬಳಿ, ಟ್ರಸ್ಟ್‍ನ್ ಅಧ್ಯಕ್ಷ ಸಾಯಬಣ್ಣಾ ಎಂ. ಹೋಳ್ಕರ್, ಉಪಾಧ್ಯಕ್ಷ ಗುಂಡಪ್ಪ ಶಿವಪೂಜಿ, ಲಕ್ಷಣರಾವ, ಭೀಮಾಶಂಕರ ದಂಡೆ, ಪೃಥ್ವಿರಾಜ ಧನಶೆಟ್ಟಿ, ಡಾ. ವಸಂತ ವಿ. ನಾಶಿ, ರಾಜು ಶಂಕರರಾದ ಕಾವಳೆ, ವಿಠಲ ಎಸ್. ಗೋಳಾ, ಶಿವಕುಮಾರ ಈರನಗುಡಿ, ಸೋಮಶೇಖರ ಹೂಗಾರ, ಅನೀಲಕುಮಾರ ಬಂಡಗೇರ್, ನಾಗರಾಜ ಹಾಗರಗಿ, ಅಭಯ ಚಂದ್ರಕಾಂತ ಸೇರಿದಂತೆ
ಗಣ್ಯ ವ್ಯಕ್ತಿಗಳು, ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮಹಿಳೆಯರು ಮತ್ತು ಹಿರಿಯ ನಾಗರಿಕರು, ಸದ್ಭಕ್ತರು ಸಾರ್ವಜನಿಕರು, ಮುದ್ದುಮಕ್ಕಳು, ವಿದ್ಯಾರ್ಥಿಗಳು ಇದ್ದರು.