ಜೈ ಭೀಮ್ ಜನಜಾಗೃತಿ ಜಾಥಾಗೆ ಭವ್ಯ ಸ್ವಾಗತ

ಹಿರಿಯೂರು.ನ.20-ಸಂವಿಧಾನ ಸಂರಕ್ಷಣೆ ಗಾಗಿ ರಾಜ್ಯ ವ್ಯಾಪಿ ಜೈ ಭೀಮ್ ಜನ ಜಾಗೃತಿ ಜಾಥಾ ವು  ಹಿರಿಯೂರಿಗೆ ಆಗಮಿಸಿತು. ಜಾಥಾವನ್ನು ರಂಜಿತಾ ಹೋಟೆಲ್ ಹತ್ತಿರ ಸ್ವಾಗತಿಸಿ, ಪ್ರಧಾನ ರಸ್ತೆಯ ಮೂಲಕ ಮೆರವಣಿಗೆ ಸಾಗಿ, ಗಾಂಧಿ ವೃತ್ತದಲ್ಲಿ ಕಾರ್ಯಕ್ರಮ ನಡೆಸಲಾಯಿತು, ಮುಂದೆ ಸಾಗಿ ಡಾ.ಬಿಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.ಈ ಜಾಥಾ ದಲ್ಲಿ ರಾಜ್ಯ ಸಂಯೋಜಕರು ರಾಜ್ಯ ಉಸ್ತುವಾರಿ ಗಳು ಮಾರಸಂದ್ರ ಮುನಿಯಪ್ಪಾಜೀ, ದಿನೇಶ್ ಗೌತಮ್ ರವರು,ರಾಜ್ಯಾಧ್ಯಕ್ಷರು ಎಂ. ಕೃಷ್ಣಮೂರ್ತಿ ಯವರು, ರಾಜ್ಯಉಪಾಧ್ಯಕ್ಷರು ಕೆ. ಬಿ. ವಾಸು,ರಾಜ್ಯ ಪ್ರಧಾನ ಕಾರ್ಯದರ್ಶಿ  ಆರ್. ಮುನಿಯಪ್ಪಾಜಿ,ರಾಜ್ಯ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ  ಅಶೋಕ್ ಚಕ್ರವರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ, ಬಿ. ಗಿರೀಶ್, ರಾಜ್ಯ ಕಾರ್ಯದರ್ಶಿ ಎನ್. ಪ್ರಕಾಶ್,ರಾಜ್ಯ ಖಜಾಂಚಿ ಆಸಿಂ , ತುಮಕೂರು ಜಿಲ್ಲಾ ಅಧ್ಯಕ್ಷ ರಾಜ ಸಿಂಹ , ಚಿತ್ರದುರ್ಗ ಜಿಲ್ಲಾ ಸಂಯೋಜಕರು ಕೆ. ಎನ್. ದೊಡ್ಡಟ್ಟಪ್ಪ , ಜಿಲ್ಲಾ ಉಪಾಧ್ಯಕ್ಷರು ತಿಮ್ಮಣ್ಣ , ಜಿಲ್ಲಾ ಕಾರ್ಯದರ್ಶಿ ಎನ್. ಮಹಾಲಿಂಗಪ್ಪ,ಶಿರಾ ತಾಲ್ಲೂಕು ಅಧ್ಯಕ್ಷರು ವೀರ ಕ್ಯಾತಪ್ಪ,ಹಿರಿಯೂರು ಅಸೆಂಬ್ಲಿ ಅಧ್ಯಕ್ಷರು ಎಂ. ಜಗದೀಶ್. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ. ರಾಘವೇಂದ್ರ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎಂ. ಡಿ ಕೋಟೆ ಚಂದ್ರಣ್ಣ, ತಾಲ್ಲೂಕು ಕಾರ್ಯದರ್ಶಿ ಎಂ. ಡಿ. ಕೋಟೆ ಓಬಳೇಶ್, ತಾಲ್ಲೂಕು ಖಜಾಂಚಿ ಎನ್. ರಂಗಸ್ವಾಮಿ, ಜಿಲ್ಲಾ ಪಂಚಾಯತ್ ಸಂಯೋಜಕರಾದ ಓಬಳೇಶ್, ತಾಲ್ಲೂಕು ಪಂಚಾಯತ್ ಸಂಯೋಜಕರಾದ ಕುಮಾರ್, ಹೂವಿನಹೊಳೆ ತಿಪ್ಪೇಶ್, ಸ್ವಾಮಿ,ಹಾಗು ಜೈ ಭೀಮ್ ಜನ ಜಾಗೃತಿ ಸಮಯದಲ್ಲಿ 50ಹಳ್ಳಿಗಳಿಗೆ ಭೇಟಿ ನೀಡಿ, ಕಾರ್ಯಕ್ರಮ ಕ್ಕೆ ಬಂದಂತಹ ಪಕ್ಷದ ಕಾರ್ಯಕರ್ತರು,ಮಹಿಳೆಯರು, ಯುವಕರು, ಪದಾಧಿಕಾರಿಗಳು ಭಾಗವಹಿಸಿದ್ದರು.