ಜೈ ಜೈ ನಂಜುಂಡ: ಲಕ್ಷಾಂತರ ಭಕ್ತಾದಿಗಳ ನಡುವೆ ಸಾಗಿದ ಪಂಚರಥಗಳು

ನಂಜನಗೂಡು: ಏ.02:- ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ದೊಡ್ಡ ಜಾತ್ರೆಯ ಸಂಭ್ರಮ ಲಕ್ಷಾಂತರ ಭಕ್ತಾದಿಗಳು ದೇವರ ದರ್ಶನ ಪಡೆದು ಜೈಕಾರ ಹಾಕಿ ಸಂಭ್ರಮಿಸಿದರು.
ಇಂದು ಬೆಳಿಗ್ಗೆ 6 ರಿಂದ 6:40 ರೂ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ಮ ಹಾ ಗೌತಮ ರಥರೋಹಣ ದೊಂದಿಗೆ ಲಕ್ಷಾಂತರ ಭಕ್ತಾದಿಗಳ ನಡುವೆ ಚಾಲನೆ ನೀಡಿದರು. ಶ್ರೀಕಂಠೇಶ್ವರ ಸ್ವಾಮಿ ಪಾರ್ವತಿ ಗಣಪತಿ ಚಂಡಕೇಶ್ವರ ಸುಬ್ರಮಣ್ಯ ಸ್ವಾಮಿ ರಥಗಳು ಕೂರಿಸಿ ರಥ ಬೀದಿಯಲ್ಲಿ ಎಳೆದರು.
ಪಂಚ ರಥಗಳಿಗೆ ವಿವಿಧ ಹೂವಿನಿಂದ ಬಣ್ಣ ಬಣ್ಣದ ಧ್ವಜಗಳಿಂದ ಸಿಂಗರಿಸಲಾಗಿತ್ತು ರಥದ ಬೀದಿಯಲ್ಲಿ ನೀರನ್ನು ಹಾಕಿ ಬಣ್ಣ ಬಣ್ಣದ ರಂಗವಲ್ಲಿ ಹಾಕಿ ಮತ್ತು ಹಸಿರು ತೋರಣಗಳಿಂದ ಸಿಂಗರಿಸಿ ನೋಡುಗರ ಗಮನ ಸೆಳೆದವು ಸಿಂಗಾರ ಗೊಂಡ ಪಂಚ ರಥಗಳು ಸಾಗಿದವು.
ಭಕ್ತಾದಿಗಳು ಜೈಕಾರ ಹಾಕಿ ಎಳೆದರು ಎಡಬಲ ಮನೆ ಮಹಡಿಯ ಮೇಲೆ ನಿಂತ ಭಕ್ತಾದಿಗಳು ರಥಗಳನ್ನು ನೋಡಿ ಕಣ್ತುಂಬಿ ಕೊಂಡರು. ರಥಗಳಿಗೆ ಭಕ್ತಾದಿಗಳು ಹಣ್ಣು ದವನ ಹಾಕಿ ತಮ್ಮ ಭಕ್ತಿ ಮೆರೆದರು. ಇದರ ಜೊತೆಗೆ ನವ ಜೋಡಿಗಳು ಬಹಳ ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಹಣ್ಣುದವನ ಎಸೆದರು
ದೇವಸ್ಥಾನದ ದಾಸೋಹದಲ್ಲಿ ಬಂದಿದ್ದ ಭಕ್ತಾದಿಗಳಿಗೆ ವಿವಿಧ ರೀತಿಯ ಪ್ರಸಾದ ನೀಡಿದರು ಇದರ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಭಕ್ತರಿಗೆ ಮಜ್ಜಿಗೆ ಪಾನಕ ಸಿಹಿ ತಿಂಡಿಗಳು ಕುಡಿಯುವ ನೀರನ್ನು ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪೆÇಲೀಸ್ ಇಲಾಖೆ ರಥದ ಸುತ್ತ ಯಾರು ಹೋಗದಂತೆ ಸಂಬಂಧಪಟ್ಟವರು ಮಾತ್ರ ಹೋಗಬೇಕು ಆ ರೀತಿ ವ್ಯವಸ್ಥೆ ಮಾಡಲಾಗಿತ್ತು ಇದರ ಜೊತೆಗೆ ರಸ್ತೆ ಆಸುಪಾಸಿನಲ್ಲಿ ಕಪಿಲ ನದಿ ಹತ್ತಿರ ದೇವಸ್ಥಾನದ ಸುತ್ತಮುತ್ತ ಸೂಕ್ತ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಿ ಸಿ ಕ್ಯಾಮೆರಾ ಅಳವಡಿಸಲಾಗಿತ್ತು ಯಾವ ರೀತಿಯ ಕಳ್ಳತನ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದರು ದನಿವರ್ಧಕದಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಅನೌನ್ಸ್ ಮಾಡುತ್ತಿದ್ದರು.
ರಥದ ಹಿಂಭಾಗ ಹಲವಾರು ಗ್ರಾಮಗಳ ಯಜಮಾನರುಗಳು ಮತ್ತು ಮುನ್ನೆಚ್ಚರಿಕೆ ಆಂಬುಲೆನ್ಸ್ ಕ್ರೇನ್ ಟಿಪ್ಪರ್ ಗಳು ಕ್ರಮವಾಗಿ ಹಿಂಬಾಲಿಸುತ್ತಿದ್ದವು. ಇದರ ಜೊತೆಗೆ ದೇವಸ್ಥಾನದ ಮಳಿಗೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ತೆರೆದಿದ್ದು ಒಟ್ಟಾರೆ ಜಿಲ್ಲಾಡಳಿತ ತಾಲೂಕು ಆಡಳಿತ ದೇವಸ್ಥಾನದ ಆಡಳಿತ ಶ್ರಮದಿಂದ ಭಕ್ತರ ಸಮ್ಮುಖದಲ್ಲಿ ಪಂಚರಥಗಳು ವಿಜ್ರಂಬಣೆಯಿಂದ ನಡೆದು ರಥದ ಬೀದಿಯಲ್ಲಿ ಸಾಗಿ ತಮ್ಮ ಸರಿಯಾದ ಸಮಯಕ್ಕೆ ಸ್ವಸ್ಥಾನ ಸೇರಿಕೊಂಡವು ದೇವಸ್ಥಾನದ ಈ ಓ ಜಗದೀಶ್ ರವರು ಬಹಳ ಮುಂಜಾಗ್ರತೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಂಡಿದರು.
ರಥದ ಬೀದಿಯಲ್ಲಿ ಪೆÇಲೀಸ್ ಬಂದು ಬಸ್ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಯಾವುದೇ ರೀತಿಯ ಐತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ರಥಗಳನ್ನು ತಮ್ಮ ಸ್ವಸ್ಥವನಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು, ಭಕ್ತಾದಿಗಳು ಕೂಡ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಜೈಕಾರ ಹಾಕಿ ರಥಗಳನ್ನು ಎಳೆದು ಸಂಭ್ರಮಿಸಿದರು.