ಜೈಸ್ವಾಲ್ ದ್ವಿತಕ, ಜಡೇಜಾ ಮಾರಕ ಬೌಲಿಂಗ್ ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್ ಗಳ ಭರ್ಜರಿ ಜಯ

ರಾಜ್‌ಕೋಟ್, ಫೆ.18- ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ದ್ವಿಶತಕ ಹಾಗೂ ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ ನೆರವಿನಿಂದ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಭಾರತ 434 ರನ್ ಗಳ ಬೃಹತ್ ಜಯ ಸಾಧಿಸಿತು.
ಐದು ಟೆಸ್ಟ್ಚಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ.


ಗೆಲುವಿಗೆ ಅಗತ್ಯವಿದ್ದ 557 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಹತ್ತಿದ್ದ ಪ್ರವಾಸಿ‌ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ದಾಳಿ ಧೂಳಿಪಟವಾಯಿತು. ಕೇವಲ 122 ರನ್ ಗಳಿಗೆ
ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು.
ಒಂದು ಹಂತದಲ್ಲಿ ಕೇವಲ 50 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತೀವ್ರ‌ ಸಂಕಷ್ಟಕ್ಮೆ ಸಿಲುಕಿತ್ತು.
ಮಾರ್ಕ್ ವುಡ್ 33 ರನ್ ಗಳಿಸಿದ್ದನ್ನು ಹೊರತುಪಡಿಸಿ ಬೆನ್ ಸ್ಟೋಕ್, ಜಾನಿ ಬೈರ್ ಸ್ಟೋ ಸೇರಿದಂತೆ ಮಧ್ಯಮ‌‌ ಕ್ರಮಾಂಕದ ಆಟಗಾರರು ತಲೆಗೆರೆಗಳಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.
ಭಾರತದ‌ ಪರ ರವೀಂದ್ರ‌ ಜಡೇಜಾ 41 ರನ್ ನೀಡಿ 5 ವಿಕೆಟ್ ಪಡೆದರೆ, ಕುದೀಪ್ ಯಾದವ್ 2, ಅಶ್ವಿನ್ ಹಾಗೂ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ ಅಬ್ಬರದ ದ್ವಿಶತಕದ ನೆರವಿನಿಂದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 434 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಮೂರನೇ ದಿನದಾಟದಲ್ಲಿ ಶತಕ ಬಾರಿಸಿ ವಿಶ್ರಾಂತಿ ಪಡೆದಿದ್ದ ಜೈಸ್ವಾಲ್ 4 ನೇ ದಿನಾದಾಟದಲ್ಲಿ ಬ್ಯಾಟಿಂಗ್ ಲಯ ಮುಂದುವರೆಸಿ ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದರು.
103 ಎಸೆತಗಳಲ್ಲಿ ಶತಕ ಸಿಡಿಸಿದ ಜೈಸ್ವಾಲ್ 236 ಎಸೆತಗಳಲ್ಲಿ 14 ಬೌಂಡರಿ, 12 ಸಿಕ್ಸರ್ ಸಿಡಿಸಿ ಅಜೇಯ 214 ರನ್ ಚಚ್ಚಿದರು. ಈ ಸರಣಿಯಲ್ಲಿ ಅವರು ಎರಡನೇ ಶತಕ ಬಾರಿಸಿದ್ದಾರೆ.
ಸರ್ಫರಾಜ್ ಖಾನ್ 62 ರನ್ ಗಳಿಸಿ ಔಟಾದರೆ, ಮತ್ತೊಂದೆಡೆ ಶತಕದ ಅಂಚಿಗೆ ಬಂದು ಚೆನ್ನಾಗಿ ಆಡುತ್ತಿದ್ದ ಶುಭ್ ಮನ್ ಗಿಲ್ ಅನಗತ್ಯ ರನ್ ಕದಿಯುವ ಭರದಲ್ಲಿ 91 ರನ್ ಗಳಿ ಸಿ ನಿರ್ಗಮಿಸಿದರು. ಈ ಸರಣಿಯಲ್ಲಿ ಎರಡನೇ ಬಾರಿಗೆ ಶತಕ ವಂಚಿತರಾದರು. ಕುಲದೀಪ್ ಯಾದವ್ ಉಪಯುಕ್ತ 27 ರನ್ ಗಳಿಸಿದರು.
ಒಟ್ಟಾರೆ ಮೂರನೇ ಪಂದ್ಯ ಇನ್ನೂ ಒಂದು ದಿನದ ಆಟ ಬಾಕಿಯಿರುವಾಗಲೇ ಮುಕ್ತಾಯ ಕಂಡಿದೆ.

ಸ್ಕೋರ್ ವಿವರ

ಭಾರತ ಮೊದಲ ಇನ್ನಿಂಗ್ಸ್ವ445
ಎರಡನೇ ಇನ್ನಿಂಗ್ಸ್ 4 ವಿಕೆಟ್ ನಷ್ಟಕ್ಕೆ 430
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 319
ಎರಡನೇ ಇನ್ನಿಂಗ್ಸ್ 122