ಜೈಷೆ ಸಂಘಟನೆಯ ಉಗ್ರರ ಸೆರೆ, ಮದ್ದುಗುಂಡು ವಶ

ಶ್ರೀನಗರ, ಸೆ ೧೧ – ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಡ್ರಗ್ಮುಲ್ಲಾ ಪ್ರದೇಶದಲ್ಲಿ ಸೇನೆ ಇಬ್ಬರು ಜೈಷೆ- ಎ-ಮೊಹಮ್ಮದ್ (ಜೆಎಂ)ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿ, ಅವರಿಂದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಭಯೋತ್ಪಾದಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅವರನ್ನು ಬಂಧಿಸಿ ಅವರ ಬಳಿ ಇದ್ದ ಎಕೆ -೪೭ ಮದ್ದುಗುಂಡುಗಳು, ಎರಡು ಗ್ರೆನೇಡ್, ೭ ಲಕ್ಷ ರೂಪಾಯಿ ನಗದು ಮತ್ತು ಇತರೆ ಯುದ್ಧೋಚಿತ ಶಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದೆ.