ಜೈವಿಕ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ:ಬಾವುಗೆ

ಬೀದರ, ಜು.16: ಕಲ್ಯಾಣ ಕನಾರ್Àಟಕ ಭಾಗದಲ್ಲಿ ಏಕೈಕ ಜೈವಿಕ ಕೇಂದ್ರವಾಗಿದ್ದು, ಪ್ರಕೃತಿ ಸ್ನೇಹಿ ಜೈವಿಕ ಕೇಂದ್ರ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತೋಟಗಾರಿಕೆ ಅಭಿವೃದ್ದಿಗೆ ಪೂರಕವಾದ ಹಲವಾರು ಬಗೆಯ ಪರಿಕರಗಳು ಮತ್ತು ಸೇವೆಗಳನ್ನು ಒಂದೇ ಸೂರನಡಿ ರೈತ ಸಮುದಾಯ, ಸಾರ್ವಜನಿಕರು, ವಿದ್ಯಾರ್ಥಿಗಳು, ಹಾಗೂ ಗ್ರಾಮೀಣ ಯುವಜನತೆಗೆÉ ಒದಗಿಸುವುದು ಉದ್ದೇಶವಿದೆ ಎಂದು ಸಮಗ್ರ ಜೈವಿಕ ಕೇಂದ್ರದ ಮುಖ್ಯಸ್ಥರಾದ ಮಲ್ಲಿಕಾರ್ಜುನ ಎಸ್.ಬಾವುಗೆ ಹೇಳಿದರು.

ಅವರು ಶುಕ್ರವಾರ ತೋಟಗಾರಿಕೆ ಇಲಾಖೆ ಸಮಗ್ರ ಜೈವಿಕ ಕೆಂದ್ರ ಹಳ್ಳದಕೇರಿ, ಬೀದರ ರಿಲಿಯನ್ಸ್ ಫೌಂಡೇಶನ್ ಹಾಗೂ ಔಟರೀಚ್ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರದಲ್ಲಿ ಬೀದರನ ಹಳ್ಳದಕೇರಿಯ ಸಮಗ್ರ ಜೈವಿಕ ಕೇಂದ್ರದ ಕಛೇರಿ ಸಭಾಂಗಣದಲ್ಲಿ ರೈತರಿಗೆ ಸಮಗ್ರ ಜೈವಿಕ ಕೇುದ್ರದಿಂದ ಸಿಗುವ ಸೌಲಭ್ಯಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೈವಿಕ ಕೇÀಂದ್ರದಲ್ಲಿ 4 ಪ್ರಯೋಗಾಲಯಗಳಿದ್ದು, ಪ್ರಯೋಗಾಲಯದಲ್ಲಿ ಲಭ್ಯವಿರುವ ಸೇವೆಗಳಾದ ವiಣ್ಣು ಮತ್ತು ನೀರು ವಿಶ್ಲೇಷಣೆ, ಜೈವಿಕ ಗೊಬ್ಬರ ಮತ್ತು ಜೈವಿಕ ಪರಿಕರಗಳು, ಅಂಗಾಂಶ ಬಾಳೆ ಸಸಿಗಳು ಹಾಗೂ ಅಣಬೆ ಬೀಜವನ್ನು ಇಲಾಖೆ ನಿಗದಿ ಪಡಿಸಿರುವ ದರವನ್ನು ಪಾವತಿಸಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮಣ್ಣು ಮತ್ತು ನೀರಿನ ಮಹತ್ವ ಬೆಳೆ ನಾಟಿಯ ಪೂರ್ವದಲ್ಲಿ ಮಣ್ಣು ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣಕ್ಕೆ ಒಳಪಡಿಸುವ ವಿಧಾನದ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ಕಲ್ಪಕಲಾ, ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಆದರಿಂದಾಗುವ ಲಾಭದ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ರೇಣುಕಾ, ಅಂಗಾಂಶ ಕೃಷಿ ಬಾಳೆಯ ವiಹತ್ವ ಹಾಗೂ ಬೇಸಾಯದ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ ಮತ್ತು ಅಣಬೆ ಬೆಳೆಯ ಮಹತ್ವ ಹಾಗೂ ಅದರ ಉಪಯೋಗ ಮತ್ತು ಬೇಸಾಯದ ಕುರಿತು ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಾಣೇಶಕುಮಾರ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ರಿಲಾಯನ್ಸ್ ಫೌಂಡೇಶನ್ ಜಿಲ್ಲಾ ಸಂಯೋಜಕ ಮಹೇಶ, ರಿಲಾಯನ್ಸ್ ಫೌಂಡೇಶನ್ ಸಹಾಯಕ ಬಾಲಾಜಿ ಮೇತ್ರೆ, ತೋಟಗಾರಿಕೆ ¸ಹಾಯಕಿ ಗಂಗಮ್ಮ, ಪ್ರಥಮ ದರ್ಜೆ ಸಹಾಯಕ ಜಗನ್ನಾಥ ಸೇರಿದಂತೆ ಬಗ್ದಲ್ ಹಾಗೂ ಖಾನಾಪುರ ಗ್ರಾಮದ ರೈತರು ಉಪಸ್ಥಿತರಿದ್ದರು.