ಜೈಲ್ ನಿಂದ ಹೊರಬಂದ ರಿಯಾ ಚಕ್ರವರ್ತಿ ಈಗ ಹೊಸಮನೆಯ ಹುಡುಕಾಟದಲ್ಲಿ.

ಡ್ರಗ್ಸ್ ಕೇಸ್ ನಲ್ಲಿ ಒಂದು ತಿಂಗಳ ಕಾಲ ಜೈಲಲ್ಲಿದ್ದು ಜಾಮೀನು ಮೇಲೆ ಹೊರಬಂದಿರುವ ನಟಿ ರಿಯಾ ಚಕ್ರವರ್ತಿ ಈಗ ಹೊಸ ಸಂಕಟದಲ್ಲಿ ಸಿಲುಕಿದ್ದಾರೆ.
ರಿಯಾ ಕುಟುಂಬದವರು ಮುಂಬೈಯ ಖಾರ್ ಕ್ಷೇತ್ರದಲ್ಲಿ ಈಗ ಹೊಸಮನೆಯ ಹುಡುಕಾಟದಲ್ಲಿ ಸುತ್ತಾಡುತ್ತಿದ್ದಾರೆ.
ಇದರ ವೀಡಿಯೋ ಕೂಡ ವೈರಲ್ ಆಗುತ್ತಿದೆ.


ರಿಯಾ ಚಕ್ರವರ್ತಿಯ ತಂದೆ ಇಂದ್ರಜಿತ್ ಮತ್ತು ತಾಯಿ ಸಂಧ್ಯಾ ಚಕ್ರವರ್ತಿ ಹೊಸ ಮನೆಯ ಹುಡುಕಾಟದಲ್ಲಿ ಮುಂಬೈಯ ಬೇರೆ ಬೇರೆ ಕಡೆ ಸುತ್ತಾಡುತ್ತಿದ್ದಾರೆ .ಯಾಕೆ ಗೊತ್ತೇ?
ರಿಯಾ ಚಕ್ರವರ್ತಿಗೆ ಮುಂಬೈಯಲ್ಲಿ ಮನೆ ಇಲ್ಲ ಎಂದು ತಿಳಿಯಬೇಡಿ. ಮುಂಬೈಯ ಸಾಂತಾಕ್ರೂಜ್ ಏರಿಯಾದಲ್ಲಿ ರಿಯಾ ಚಕ್ರವರ್ತಿಗೆ ಪ್ಲ್ಯಾಟ್ ಇದೆ. ಆದರೆ ಈ ಮನೆ ಇರುವ ಕಟ್ಟಡದ ಇತರ ನಿವಾಸಿಗಳು ರಿಯಾಗೆ “ನೀವು ಇಲ್ಲಿಂದ ಬಿಟ್ಟು ಬೇರೆ ಕಡೆ ಹೋಗಿ” ಎಂದು ಒತ್ತಡ ಹಾಕುತ್ತಿದ್ದಾರೆ.
ಸುಶಾಂತ್ ಸಿಂಗ್ ರಾಜಪೂತ್ ಸಾವಿನ ನಂತರ ಕಾಣಿಸಿದ ಡ್ರಗ್ಸ್ ಕನೆಕ್ಷನ್ ನಲ್ಲಿ
ರಿಯಾ ಚಕ್ರವರ್ತಿ ಕೂಡಾ ಇದ್ದು, ಸೆಪ್ಟೆಂಬರ್ ೮ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದವರು ಬಂಧಿಸಿದ್ದರು .ಆನಂತರ ರಿಯಾ ಚಕ್ರವರ್ತಿ ವಾಸಿಸುತ್ತಿರುವ ಸಂತಾಕ್ರೂಜ್ ಪ್ಲಾಟಿನ ಕಟ್ಟಡದ ಎದುರು ಮೀಡಿಯಾದವರು ಬರುತ್ತಲೇ ಇದ್ದಾರೆ. ಇದರಿಂದ ಕಿರಿಕಿರಿ ಗೊಂಡ ಸೊಸೈಟಿಯ ಇನ್ನಿತರ ಫ್ಲ್ಯಾಟ್ ನಿವಾಸಿಗಳು ರಿಯಾ ಚಕ್ರವರ್ತಿಯ ಕುಟುಂಬಕ್ಕೆ “ನೀವು ಇಲ್ಲಿಂದ ಬೇರೆಲ್ಲಾದರೂ ಹೊರಟುಹೋಗಿ. ನಮಗೆ ಇಲ್ಲಿ ಕಿರಿಕಿರಿಯಾಗುತ್ತಿದೆ” ಎಂದು ಆಕ್ಷೇಪ ಎತ್ತಲು ಶುರು ಮಾಡಿದ್ದಾರಂತೆ.


ಜೈಲಿನಿಂದ ಹೊರಬಂದ ನಂತರ ರಿಯಾ ಚಕ್ರವರ್ತಿಗೆ ಇನ್ನಿತರ ಫ್ಲ್ಯಾಟ್ ನಿವಾಸಿಗಳ ಒತ್ತಡ ಹೆಚ್ಚಾಗುತ್ತಿದೆ.ಅತ್ತ ಮೀಡಿಯಾದವರಿಂದ ಪಾರಾಗಲು ಈಗ ರಿಯಾ ಚಕ್ರವರ್ತಿ ಫ್ಲ್ಯಾಟ್ ನ ಹುಡುಕಾಟದಲ್ಲಿ ಇದ್ದಾರೆ.ಆಗಸ್ಟ್ ನಲ್ಲಿ ಮುಂಬೈ ಪೊಲೀಸರ ಪ್ರೊಟೆಕ್ಷನ್ ಕೂಡಾ ರಿಯಾ ಚಕ್ರವರ್ತಿ ಕೇಳಿದ್ದಿದೆ.ಸೆಪ್ಟೆಂಬರ್ ನಂತರ ಜೈಲಿಗೆ ಹೋಗಿ ಈಗ ಹೊರಗೆ ಬಂದ ನಂತರ ಮೀಡಿಯಾ ಕರ್ಮಿಗಳು ಮತ್ತೆ ಈಕೆಯ ಹಿಂದೆ ಸುತ್ತಾಡುತ್ತಿರುವುದನ್ನು ಗಮನಿಸಿದ ರಿಯಾ ಚಕ್ರವರ್ತಿ ಕಿರಿಕಿರಿಗೊಂಡು ಬೇರೆ ಮನೆಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಮೊಮ್ಮಗಳ ಜೊತೆ ಬಿಗ್ ಬಿ ಅಮಿತಾಭ್ ರ ಹೊಸ ಪ್ರೊಜೆಕ್ಟ್.

೭೮ ವರ್ಷದ ಮಹಾನಾಯಕ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ .ಇದರಲ್ಲಿ ಅವರು ತನ್ನ ೯ ವರ್ಷದ ಮೊಮ್ಮಗಳು ಆರಾಧ್ಯಾಳ ಜೊತೆ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡುವುದು ಕಂಡುಬಂದಿದೆ.


ಬಿಗ್-ಬಿ ಅದಕ್ಕೆ ಕ್ಯಾಪ್ಷನ್ ಬರೆಯುತ್ತಾ “ನಾಳೆ ಬೆಳಿಗ್ಗೆ ಸಂಭ್ರಮದ ಶುಭಾರಂಭ. ಇನ್ನೊಂದು ಹೊಸವರುಷ ದೊಡ್ಡ ಸಂಗತಿ. ಪರಿವಾರದ ಜೊತೆ ಮ್ಯೂಸಿಕ್ ಹಾಡು ಸಂತೋಷ” ಎಂದಿದ್ದಾರೆ.


ಫೋಟೋದಲ್ಲಿ ಅಮಿತಾಭ್ ಮತ್ತು ಆರಾಧ್ಯ ಸಿಂಗಿಂಗ್ ಕೌಚ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ಆರಾಧ್ಯಳ ಜೊತೆ ಮಾತನಾಡುತ್ತಿದ್ದಾರೆ, ಮತ್ತು ಪ್ರೋಸೆಸ್ ವಿಷಯವಾಗಿ ಮಾಹಿತಿ ನೀಡುತ್ತಿದ್ದಾರೆ. ಅಭಿಷೇಕ್ ಆರಾಧ್ಯ ಮತ್ತು ಐಶ್ವರ್ಯರ ನಡುವೆ ನಿಂತಿರುವುದನ್ನು ಕಾಣಬಹುದು.
ಬಿಗ್-ಬಿ ಅವರು ಆರಾಧ್ಯ ಜೊತೆಗಿನ ಸೆಲ್ಫಿ ಕೂಡ ಶೇರ್ ಮಾಡಿದ್ದಾರೆ. ಅಮಿತಾಬ್ ಬರೆದಿದ್ದಾರೆ “ಮೊಮ್ಮಗಳು ಮತ್ತು ಅಜ್ಜ ಸ್ಟುಡಿಯೋದಲ್ಲಿ ಮೈಕ್ ಎದುರು ಬಂದು ಸಂಗೀತವನ್ನು ಹಾಡಿದರು”.


ಆದರೆ ಅಮಿತಾಭ್ ಬಚ್ಚನ್ ಈ ಪ್ರೊಜೆಕ್ಟ್ ನ ವಿಷಯವಾಗಿ ಹೆಚ್ಚಿಗೆ ಯಾವ ಮಾಹಿತಿಯನ್ನು ನೀಡಿಲ್ಲ.
ಇತ್ತೀಚೆಗಷ್ಟೇ ಬಿಗ್-ಬಿ ಬಹಳಷ್ಟು ಚರ್ಚೆ ಹುಟ್ಟಿಸಿದ್ದರು. ಅವರು ತಮ್ಮ ಅಭಿಮಾನಿಯೊಬ್ಬರಲ್ಲಿ ಕೊರೋನಾ ಕಾಲರ್ ಟ್ಯೂನ್ ಕುರಿತು ಕ್ಷಮೆಯಾಚಿಸಿದ್ದರು.


ಅಭಿಮಾನಿಯೊಬ್ಬರು ಅವರಲ್ಲಿ ಕೊರೊನಾ ಟ್ಯೂನ್ ಬಂದ್ ಮಾಡಲು ವಿನಂತಿ ಮಾಡಿದ್ದರು .ಆದರೆ ಬಿಗ್ ಬಿ ಬರೆದಿದ್ದರು “ನಾನು ದೇಶ ಮತ್ತು ಸಮಾಜಕ್ಕಾಗಿ ನಿಶುಲ್ಕಸೇವೆ ಮಾಡುತ್ತಿರುತ್ತೇನೆ. ನಿಮಗೆ ಕೊರೋನಾ ಟ್ಯೂನ್ ಕಷ್ಟ ಆದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ಯಾಕಂದರೆ ಅದನ್ನು ತೆಗೆಯುವುದು ನನ್ನ ಕೈಯಲ್ಲಿ ಇಲ್ಲ” ಎಂದು ಉತ್ತರಿಸಿದ್ದರು.