ಜೈಲು ಸಿಬ್ಬಂದಿ ಜೊತೆ ಸಂಜನಾ – ರಾಗಿಣಿ ಸ್ನೇಹ


ಬೆಂಗಳೂರು,ನ.೨೨-ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿ ತಮ್ಮ ಸಹಚರರೊಂದಿಗೆ ಮತ್ತು ಜೈಲು ಸಿಬ್ಬಂದಿಯೊಂದಿಗೆ ಸ್ನೇಹಗಳಿಸಿ ಮಾತುಕತೆ ನಡೆಸುತ್ತಾ ಕಾಲ ಕಳೆಯುತ್ತಿದ್ದಾರೆ.
ಜೈಲಿನ ಪ್ರತ್ಯೇಕ ಬ್ಯಾರಕ್‌ನಲ್ಲಿರುವ ಇಬ್ಬರು ಸಿಬ್ಬಂದಿಯೊಂದಿಗೆ ಸ್ನೇಹಗಳಿಸಿ ಮಾತುಕತೆ ನಡೆಸ ತೊಡಗಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿಗೆ ಇಡಿ ಅಧಿಕಾರಿಗಳು ತೆರಳಿ ವಿಚಾರಣೆ ನಡೆಸಿದ್ದರು.
ವಿಚಾರಣೆ ನಂತರ ಈವರೆಗೂ ಒಬ್ಬರನ್ನೊಬ್ಬರು ಮಾತನಾಡಿಸದೆ ಎದುರುಬದುರಾದರೂ ಕೂಡ ಮೌನ ವಹಿಸಿದ್ದಾರೆಂದು ತಿಳಿದುಬಂದಿದೆ.
ಸದ್ಯ ಸಂಜನಾ ಕೊಠಡಿಯಲ್ಲಿ ಇಬ್ಬರು ಸಹ ಕೈದಿಗಳು ಇದ್ದು, ರಾಗಿಣಿ ಕೊಠಡಿಯಲ್ಲಿ ಸಹ ಇಬ್ಬರು ಕೈದಿಗಳು ಇದ್ದಾರೆ.
ನ್ಯಾಯಾಲಯದಲ್ಲಿ ಇಬ್ಬರ ಜಾಮೀನು ಅರ್ಜಿ ಕೂಡ ತಿರಸ್ಕೃತವಾಗಿವೆ. ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ಒಟ್ಟಿನಲ್ಲಿ ಜೈಲಿನಿಂದ ಹೊರಬರುವವರೆಗೂ ಹೀಗೆ ದಿನ ಕಳೆಯಬೇಕಾಗಿದೆ.