ಜೈಲುಗಳಲ್ಲಿ ವಿಐಪಿ ಕೊಠಡಿಗಳಿಗೆ ಬೀಗ

ಚಂಡಿಘಡ.(ಪಂಜಾಜ್).ಮೇ೧೪: ವಿಐಪಿ ಸಂಸ್ಕೃತಿಯನ್ನು ಕೊನೆಗಾಣಿಸುವ ಪ್ರಯತ್ನದಲ್ಲಿ, ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಜೈಲುಗಳಲ್ಲಿರುವ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‌ಳಾಗಿ ಪರಿವರ್ತಿಸುವುದಾಗಿ ಘೋಷಿಸಿದೆ.
ರಾಜ್ಯ ಸರ್ಕಾರವು ತೆಗೆದುಕೊಂಡ ಈ ಕ್ರಮವು ಜೈಲು ಸಿಬ್ಬಂದಿಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ.ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಉದ್ದೇಶದಿಂದ, ಜೈಲು ಸಿಬ್ಬಂದಿಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಜೈಲುಗಳಲ್ಲಿನ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್ಗಳಾಗಿ ಪರಿವರ್ತಿಸಲಾಗುವುದು” ಎಂದು ಸಿಎಂ ಭಗವಂತ್ ಮಾನ್ ಹೇಳಿದರು.
ಜೈಲಿನಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜೈಲಿನ ಕೈದಿಗಳಿಂದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಮಾತನಾಡಿದ ಸಿಎಂ ಭಗವಂತ್ ಮಾನ್, “ನಾವು ಜೈಲಿನ ಆವರಣದಿಂದ ದರೋಡೆಕೋರರ ೭೧೦ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದೇವೆ. ನಾವು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ, ಫೋನ್ ಗಳನ್ನು ಒಳಗೆ ಪಡೆದವರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ”.
ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ. ಎಫ್‌ಐಆರ್ಗಳನ್ನು ಸಹ ದಾಖಲಿಸಲಾಗುತ್ತಿದೆ. ನಾವು ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ” ಎಂದು ಸಿಎಂ ಹೇಳಿದರು.