ಜೈಲಿನ ಕೈದಿಗಳ ನೇತ್ರ ತಪಾಸಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.24: ನಗರದ ಕೇಂದ್ರ ಕಾರಾಗೃಹದಲ್ಲಿ ಶ್ರೀ ಗುರುಪುಷ್ಕರ ಸೇವಾ ಸಮಿತಿಯಿಂದ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ  400 ಕೈದಿಗಳನ್ನು ಪರೀಕ್ಷಿಸಲಾಯಿತು.
ನಗರದ ನೇತ್ರ ತಜ್ಞ ಡಾ.ವಿಜಯ್ ನಾಗರಾಜ್ ನೇತ್ರ ತಪಾಸಣೆ ಮಾಡಿದರು.  ಕೇಂದ್ರ ಕಾರಾಗೃಹದ ಅಧಿಕಾರಿಗಳಾದ ಲತಾ,  ಅಮ್ರೀಶ್ ಪೂಜಾರಿ ಇದ್ದರು. 
ಸಮಿತಿಯ ಅಧ್ಯಕ್ಷ ಶಾ ಅಶೋಕ್‌ ಭಂಡಾರಿ, ಕಾರ್ಯದರ್ಶಿ ಶಾ ಪ್ರಕಾಶ್, ಮೆಹ್ತಾ, ಪ್ರವೀಣ್ ಪರಾಖ್ ಸದಸ್ಯ ಸುರೇಶ ಪಾರೇಖ್, ಫುಲ್‌ಚಂದ್ ಪಾರೇಖ್, ಭಾರತ್ ಕರ್ನಾವತ್ ದೀಪೇಶ್ ಪಾರೇಖ್ ಮೊದಲಾದವರು ಉಪಸ್ಥಿತರಿದ್ದರು.