ಜೈಲಿನಲ್ಲಿ ವಾಶ್ ರೂಂ ಇಲ್ಲ, ಇಮ್ರಾನ್ ಅಳಲು

ಇಸ್ಲಮಾಬಾದ್, ಮೇ. ೧೧- ತಮ್ಮ ಬಂಧನವಾಗಿ ೨೪ ಗಂಟೆ ಕಳೆದರೂ ವಾಶ್ ರೂಂ ಇಲ್ಲ, ನಿಧಾನವಾಗಿ ಸಾಯಿಸಲು ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ಅವರ ಬಂಧನದ ನಂತರ ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆ ,ಹಿಂಸಾಚಾರಕ್ಕೆ ಕಾರಣವಾಗಿದೆ. ಈ ನಡುಗೆ ಇಮ್ರಾನ್ ಖಾನ್ ಹೇಳಿಕೆ ಮತ್ತಷ್ಟು ಹಿಂಸಾಚಾರಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಬೆಂಬಲಿಗರು ಮತ್ತು ಸದಸ್ಯರು ದೇಶಾದ್ಯಂತ ಪೊಲೀಸರೊಂದಿಗೆ ಘರ್ಷಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಬಂಧನಕ್ಕೊಳಗಾದ ಒಂದು ದಿನದ ನಂತರ, ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ತಮ್ಮ ಜೀವದ ಬಗ್ಗೆ ಭಯಪಡುತ್ತಾರೆ ಮತ್ತು ದೇಶದಲ್ಲಿ ಪ್ರಸ್ತುತ ಶೆಹಬಾಜ್ ಷರೀಫ್ ಸರ್ಕಾರ ಅವರನ್ನು ಜೈಲಿನ ಒಳಗೆ ಹೇಗೆ ನಡೆಸಿಕೊಳ್ಳುತ್ತಿದೆ ಎಂದು ವಿವರವಾಗಿ ಮಾಹಿತಿ ನೀಡಿದ್ದಾರೆ.

ಇಮ್ರಾನ್ ಖಾನ್ ಅವರು ನ್ಯಾಯಾಲಯದ ಮುಂದೆ ಮಾತನಾಡುತ್ತಾ, ಶೆಹಬಾಜ್ ಷರೀಫ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮಕ್ಸೂದ್ ’ಚಪ್ರಾಸಿ’ ಕಳೆದ ವರ್ಷ ನಿಧನರಾಗಿದ್ದರು.

ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಇಮ್ರಾನ್ ಖಾನ್ ನ್ಯಾಯಾಲಯದಲ್ಲಿ ತನಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ೨೪ ಗಂಟೆಗಳ ಕಾಲ ವಾಶ್ ರೂಂ ಅನ್ನು ಬಳಸಲು ಅನುಮತಿಸಲಿಲ್ಲ ಎಂದು ಹೇಳಿಕೊಂಡಿದ್ದಾರಡ.

ಅಧಿಕಾರಿಗಳು ಶೀಘ್ರದಲ್ಲೇ ತಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದ್ದಾರೆಅಲ್ ಖಾದಿರ್ ಟ್ರಸ್ಟ್ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ.