ಜೈಲಿನಲ್ಲಿರುವ ಪತಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸಿದ ಪತ್ನಿ !

ಕಲಬುರಗಿ,ಆ.2-ಜೈಲಿನಲ್ಲಿರುವ ಪತಿಗೆ ಪತ್ನಿ ಗಾಂಜಾ ಸರಬರಾಜಲು ಮಾಡಲು ಯತ್ನಿಸಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ನಗರದ ಕೇಂದ್ರ ಕಾರಾಗೃಹದಲ್ಲಿರುವ ಪತಿ ಜಾಲೇಂದ್ರನಾಥ ಕಾವಳೆ ಎಂಬಾತನಿಗೆ ಆತನ ಪತ್ನಿ ಸುನಿತಾ ಕಾವಳೆ ಗಾಂಜಾ ಸರಬರಾಜು ಮಾಡಲು ಯತ್ನಿಸಿದ್ದಾಳೆ.
ಜೈಲಿನಲ್ಲಿರುವ ಪತಿ ಜಾಲೇಂದ್ರನಾಥನನ್ನು ಭೇಟಿಯಾಗಲು ಸುನಿತಾ ಕಾರಾಗೃಹಕ್ಕೆ ಹೋಗಿದ್ದಳು. ಈ ವೇಳೆ ಆಕೆ ಪತಿ ಜಾಲೇಂದ್ರನಾಥನಿಗೆ ನೀಡಲು ತಂದಿದ್ದ ಜೀನ್ಸ್ ಪ್ಯಾಂಟ್ ಪರಿಶೀಲಿಸಿದಾಗ ಪ್ಯಾಂಟಿನ ಬೆಲ್ಟ್ ಪಟ್ಟಿಯ ಒಳಬದಿಯಲ್ಲಿ ಕೈಯಿಂದ ಹೊಲಿಗೆ ಹಾಕಿದ ದಪ್ಪ ವಸ್ತು ಕಂಡು ಬಂದಿದೆ. ಹೊಲಿಗೆ ಬಿಚ್ಚಿ ನೋಡಿದಾಗ ಅದರಲ್ಲಿ 15 ಗ್ರಾಂ. ಗಾಂಜಾ ಇರುವುದು ಪತ್ತೆಯಾಗಿದೆ. ಇದೇ ವೇಳೆ ಮಹಿಳಾ ಪ್ರಿಸ್ಕಿಂಗ್ ರೂಮಿನಲ್ಲಿ ತಪಾಸಣೆಗೆ ಹೋಗಿದ್ದ ಸುನಿತಾ ಪರರಾಗಿಯಾಗಿದ್ದಾಳೆ. ಈ ಸಂಬಂಧ ಜೈಲಿನ ವಾರ್ಡರ್ ವಿಜಯಕುಮಾರ ಕುದರೆ ಅವರು ಸುನಿತಾ ಕಾವಳೆ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಾರಾಗೃಹಗಳ ತಿದ್ದುಪಡಿ ಅಧಿನಿಯಮ ಹಾಗೂ ಎನ್‍ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.