
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.28: ಜಿಲ್ಲೆಯಲ್ಲಿ ಸುಳ್ಳು, ಮೋಸ, ವಂಚನೆ, ಜೈಲಿಗೆ ಹೋದವರು, ಹೋಗಬೇಕಾದವರ ಮಧ್ಯೆ ಆಮ್ ಆದ್ಮಿ ಪಕ್ಷದ ನಮ್ಮ ಅಭ್ಯರ್ಥಿ ಉತ್ತಮ ವ್ಯಕ್ತಿಯಾಗಿದ್ದು ಮತ ನೀಡಿ ಎಂದು ಪಕ್ಷದ ಮುಖಂಡ ಮುಖ್ಯ ಮಂತ್ರಿ ಚಂದು ಮನವಿ ಮಾಡಿದ್ದಾರೆ
ಅವರು ಇಂದು ನಗರದಲ್ಲಿನ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿ. ಈ ಚುನಾವಣೆ
ಸತ್ಯ ಮತ್ತು ಸುಳ್ಳುಗಳ ನಡುವೆ ನಡೆಯುವ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಅಧಿಕಾರ ನಡೆಸಿವೆ. ಅನೈತಿಕ ಸಂಬಂಧದಿಂದ ಜೆಡಿಎಸ್ ನವರು ಅಧಿಕಾರ ಮಾಡಿದರು. ಸ್ವಾತಂತ್ರ್ಯ ಬಂದ ನಂತರ ನಾವು ಅತಂತ್ರ ಸ್ಥಿತಿಯಲ್ಲಿದ್ದೇವೆ. ಇಂದಿರಾ ಗಾಂಧಿ, ಮೋದಿ ಅವರ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಾಗಿದೆ. ದೇಶದಲ್ಲಿ ಬಡವರು ಬಡವರಾಗಿ, ಬಲಾಢ್ಯರು ಬಲಾಢ್ಯರಾಗಿದ್ದಾರೆ. ಅಂದು ಬ್ರಿಟಿಷ್ ರನ್ನು ದೇಶ ಬಿಟ್ಟು ತೊಲಗಿ ಎನ್ನುವಂತಿತ್ತು. ಇಂದು ರಾಜಕೀಯ ಬಿಟ್ಟು ತೊಲಗಿ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ವ್ಯಾಪಾರಿಕರಣವಾಗಿದ್ದು, ದಂಧೆಯಾಗಿದೆ. ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ಬಡವರು ಪರದಾಡುವಂತಾಗಿದೆಂದು ಆರೋಪಿಸಿದರು.
ಪ್ರಧಾನ ಮಂತ್ರಿ ಮೋದಿ ಅವರು ಉಚಿತವಾಗಿ ಕೊಟ್ಟರೆ ಪ್ರಗತಿ ಕಾಣುವುದಿಲ್ಲ ಎಂದು ಹೇಳುವ ಮೂಲಕ ಜನರನ್ನು ಮೋಸಮಾಡುತ್ತಿದ್ದಾರೆ. ಬಿಜೆಪಿಯಿಂದ ಸ್ವಾಯತ್ತತ ಸಂಸ್ಥೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ದೇಶಕ್ಕೆ ಮಾರಕ ಎಂದು ಹೇಳಿದ ಪ್ರಧಾನ ಮಂತ್ರಿಗಳು, ಅವರದೇ ಪಕ್ಷದವರನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಬಿಎಸ್ ವೈ ಸೇರಿ ಅನೇಕರಿಗೆ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿದ್ದಾರೆ ಎಎಪಿಯ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷದಿಂದ ಕಾಪಿ ಮಾಡಲಾಗಿದೆಂದರು.
ಸಿಎಂ ಬೊಮ್ಮಾಯಿ ಅವರು ಮೀಸಲಾತಿ ವಿಚಾರದಲ್ಲಿ ಮೋಸ ಮಾಡಿದ್ದಾರೆ. ಇದಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಮುಸ್ಲೀಂರೂ ನಮ್ಮವರೇ ಅವರಿಗೇಕೆ ಮೀಸಲಾತಿ ಬೇಡ ಎಂಬುದು ಅರ್ಥವಾಗದ ವಿಚಾರ ಎಂದರು.
ಪಕ್ಷದ ಅಭ್ಯರ್ಥಿ ಕೊರ್ಲಗುಂದಿ ದೊಡ್ಡ ಕೇಶವರೆಡ್ಡಿ, ಮಾತನಾಡಿ ನಾನು ಈ ಪಕ್ಷಕ್ಕೆ ಹೊಸಬನಿರಬಹುದು, ಭ್ರಷ್ಟಾಚಾರಿ ಅಲ್ಲ, ಯಾರಿಗೂ ಮೋಸ ಮಾಡಿಲ್ಲ. ಅಕ್ರಮ ವ್ಯವಹಾರ ಮಾಡಿ ಹಣ ಸಂಪಾದನೆ ಮಾಡಿಲ್ಲ. ಜನಸೇವೆ ಮಾಡಲು ಪಕ್ಷ ಅವಕಾಶ ನೀಡಿದೆ ಸ್ಪರ್ಧೆ ಮಾಡಿರುವೆ. ಇನ ಬೆಂಬಲುಸುತ್ತಾರೆಂಬ ನಂಬಿಕೆ ಇದೆಂದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಹಿರೇಮಠ, ಕೆ.ವಿ.ಮಂಜುನಾಥ, ಕಿರಣ್ ಕುಮಾರ್, ಬಾದಾಮಿ ಶಿವಲಿಂಗ ಮೊದಲಾದವರು ಇದ್ದರು.