ಜೈಲಲ್ಲಿ ಕನ್ನಡ ಕಲಿತ ಚಿನ್ನಮ್ಮ

ಬೆಂಗಳೂರು,ಡಿ.೧೭-ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅಪ್ತೆ ಶಶಿಕಲಾ ನಟರಾಜನ್(ಚಿನ್ನಮ್ಮ)ಅವರ ಶಿಕ್ಷಾವಧಿ ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು ಅದಕ್ಕೂ ಮುನ್ನ ಬಿಡುಗಡೆ ಸಾಧ್ಯತೆಯಿಲ್ಲ
ಶಿಕ್ಷೆ ಪೂರ್ಣ ಗೊಳ್ಳುವವರೆಗೆ ಶಶಿಕಲಾ ನಟರಾಜನ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನ ಶಶಿಕಲಾ ಅವರ ಬಿಡುಗಡೆ ಮಾಡಲಾಗುತ್ತದೆ ಎನ್ನುವ ವದಂತಿಗಳನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಕನ್ನಡ ಕಲಿಕೆ:
ಈ ನಡುವೆ ನಾಲ್ಕು ವರ್ಷಗಳ ಜೈಲಿನಲ್ಲಿದ್ದ “ಚಿನ್ನಮ್ಮ’ ಕನ್ನಡ ಕಲಿತಿದ್ದಾರೆ ನಲಿ-ಕಲಿ ಯೋಜನೆ ಅಡಿಯಲ್ಲಿ ನಿತ್ಯ ಶಿಕ್ಷಕರು ಬರುತ್ತಾರೆ. ಅವರ ಮೂಲಕ ಕನ್ನಡ ಭಾಷೆಕಲಿತಿರುವ ಚಿನ್ನಮ್ಮ, ಕನ್ನಡ ಬರೆಯುವುದು, ಓದುವುದನ್ನು ಅಭ್ಯಸಿಕೊಂಡಿದ್ದಾರೆ.
ಕನ್ನಡದಲ್ಲಿ ಯಾರೇ ಮಾತನಾಡಿದರೂ ಅದನ್ನು ಅರ್ಥೈಸಿಕೊಂಡು ಕನ್ನಡದಲ್ಲೇ ಉತ್ತರ ನೀಡುವ ಅವರು ಕನ್ನಡದ ಮೂರನೇ ತರಗತಿ ಉತ್ತೀರ್ಣರಾಗಿದ್ದಾರೆ.
ಪ್ರತಿಭಾ ಪ್ರದರ್ಶನ:
ಇದರೊಂದಿಗೆ ಅವರ ಸಂಬಂಧಿ ಜೆ.ಇಳವರಸಿ ಕೂಡ ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡು, ಸ್ಪಷ್ಟವಾಗಿ ಮಾತನಾಡುತ್ತಾರೆ ಹಾಗೂ ನಿತ್ಯ ದೇವರ ಹಾಡುಗಳನ್ನು ಹಾಡುತ್ತಾರೆ. ವಿಶೇಷ ಕಾರ್ಯಕ್ರಮಗಳಲ್ಲೂ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಾರೆ. ಕನ್ನಡ ಬರೆಯುವುದನ್ನು ಕಲಿತುಕೊಂಡಿದ್ದಾರೆ. ಜೈಲಿನ ಶಾಲೆಗೆ ಹೋಗಿ ಕಂಪ್ಯೂಟರ್, ಕನ್ನಡ ಕಲಿಕೆ ಹಾಗೂ ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಸಾಮಾನ್ಯ ಮಹಿಳೆಯಂತೆ ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್, ಕನ್ನಡ ಕಲಿಯುತ್ತ, ಆಕರ್ಷಕವಾದ ಬಳೆಗಳು, ಕಿವಿಯೋಲೆತಯಾರಿಸಿದ್ದಾರೆ. ತೋಟದಲ್ಲಿ ಸಹ ಕೈದಿಗಳ ಜತೆ ಸೇರಿ ಕಲ್ಲಂಗಡಿ, ಅಣಬೆ, ಸೊಪ್ಪು, ತರಕಾರಿ ಬೆಳೆದಿದ್ದಾರೆ.
ಜೈಲಿಗೆ ಬಂದಾಗ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಅವರು, ನಿಧಾನವಾಗಿ ಎಲ್ಲರೊಂದಿಗೆ ಬೆರೆಯುತ್ತ ತೋಟಗಾರಿಕೆ, ಕರಕುಶಲ ಕಲೆಗಳಲ್ಲಿ ಆಸಕ್ತಿಹೊಂದಿದರು. ನಿತ್ಯ ಬೆಳಗ್ಗೆ ೬.೩೦ರ ಸುಮಾರಿಗೆ ಏಳುವ ಅವರು, ತಮ್ಮ ಕೊಠಡಿಯ ಮುಂಭಾಗದಲ್ಲಿರುವ ಪಡಸಾಲೆಯನ್ನು ಗುಡಿಸುತ್ತಾರೆ. ಬಳಿಕ ಬ್ಯಾರಕ್ ಕೊಠಡಿಯಲ್ಲಿನ ದೇವರ ಪೂಜೆ ನೆರವೇರಿಸುತ್ತಾರೆ. ನಂತರ ತಮ್ಮ ಸಂಬಂಧಿ ಇಳವರಸಿ ಹಾಗೂ ಇತರ ಜತೆ ಸೇರಿ ಉಪಾಹಾರ ಸೇವಿಸಿ ಬ್ಯಾರಕ್‌ಗೆ ಮರಳುತ್ತಾರೆ.
ಟೈಲರಿಂಗ್ ಕಸೂತಿ:
ಶಶಿಕಲಾ ಅವರಿಗೆ ತೋಟಗಾರಿಕೆ ಜತೆಗೆ ಬಳೆಗಳು, ಕಿವಿಯೋಲೆ ತಯಾರಿಸುವುದೆಂದರೆ ಬಹಳ ಇಷ್ಟ. ಹೀಗಾಗಿ ವಿಭಿನ್ನ, ವಿಶೇಷ ರೀತಿಯ ಬಳೆಗಳು, ಕಿವಿಯೊಳೆ ತಯಾರಿಸುತ್ತಾರೆ. ಬೇರೆಯವರಿಗೂ ಕಲಿಸಿಕೊಡುತ್ತಿದ್ದಾರೆ. ಇದರೊಂದಿಗೆ ಸಜಾಬಂಧಿಗಳಿಗೆ ಟೈಲರಿಂಗ್ ಮತ್ತು ಇನ್ನಿತರ ಕೆಲಸಗಳ ಬಗ್ಗೆ ಕಾರಾಗೃಹದಲ್ಲಿ ತರಬೇತಿ ನೀಡಲಾಗುತ್ತದೆ. ಶಶಿಕಲಾ ಅವರು ಜೈಲಿನಲ್ಲಿ ನಿತ್ಯ ಎರಡು ತಾಸು ಟೈಲರಿಂಗ್ ಮತ್ತು ಕಸೂತಿ (ಎಂಬ್ರಾಯಿಡರಿ) ಮಾಡುವ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಕೆಲವು ಬಟ್ಟೆಗಳಿಗೆ ಕಸೂತಿ ಹಾಕಿದ್ದಾರೆ. ಆಕರ್ಷಕ ಬಳೆಗಳು, ಕಿವಿಯೋಲೆ ತಯಾರು ಮಾಡಿ ಸಂಭ್ರಮ ಪಡುತ್ತಿದ್ದರು.
ಅಣಬೆ ಬೇಸಾಯ :
ಶಶಿಕಲಾ ಅವರಿಗೆಅಣಬೆ ಬೆಳೆಯುವುದು ಎಂದರೆ ಬಹಳ ಇಷ್ಟ. ಅವರೇ ಹೇಳಿಕೊಂಡಂತೆ ಮೊದಲಿನಿಂದಲೂ ಅಣಬೆ ಕೃಷಿಯಲ್ಲಿ ಬಹಳ ಆಸಕ್ತಿ. ಹೀಗಾಗಿ ತಾವೇಕೊಠಡಿಯೊಂದರಲ್ಲಿ ಸಣ್ಣ ಕುಂಡಗಳಲ್ಲಿ ಚಿಪ್ಪು ಅಣಬೆ ಬೆಳೆದಿದ್ದರು. ಜತೆಗೆ ಮಹಿಳಾ ಬ್ಯಾರಕ್ ಪಕ್ಕದಲ್ಲಿರುವ ತೋಟದಲ್ಲಿ ಪ್ರತ್ಯೇಕವಾಗಿ ಕಲ್ಲಂಗಡಿ ಬೆಳೆಯುತ್ತಿದ್ದರು. ಈ ಮೂಲಕ ಹಣ ಕೂಡ ಗಳಿಸಿದ್ದಾರೆ