ಜೈಲರ್ ಬಿಡುಗಡೆ ಮುನ್ನಹಿಮಾಲಯಕ್ಕೆ ತೆರಳಿದ್ದ ರಜನಿ

ಹಿಮಾಲಯ ,ಅ.೧೬- ರಜನೀಕಾಂತ್ ಅಭಿನಯದ ಜೈಲರ್ ದೊಡ್ಡ ಮಟ್ಟದಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ದುಡ್ಡಿನ ಸುರಿಮಳೆಯಾಗುತ್ತಿದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ರಜನಿ ಹಿಮಾಲಯಕ್ಕೆ ತೆರಳಿದ್ದರು. ಅಲ್ಲಿ ಆಧ್ಯಾತ್ಮಿಕ ಅನ್ವೇಷಣೆ ಜೊತೆಗೆ,ಓದು,ಗ್ರಂಥಗಳ ಅಧ್ಯಯನ,ಧ್ಯಾನ,ಜಪ-ತಪ,ಯೋಗ, ತಿರುಗಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಡುವಿಲ್ಲದ ಚಟುವಟಿಕೆಯಲ್ಲಿ ಭಾಗಿಯಾಗಿರುತ್ತಾರೆ.
ರಜನಿಕಾಂತ್ ಅವರು ಚೆನ್ನೈನಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ತಮ್ಮ ಆತ್ಮೀಯ ಗೆಳೆಯ ಹರಿ ಜೊತೆ ದೆಹಲಿಗೆ ಹೋಗಿ ನಂತರ ರಜನಿಕಾಂತ್ ದೆಹಲಿಯಿಂದ ಉತ್ತರಾಖಂಡದ ನೈನಿತಾಲ್‌ಗೆ ಹೋಗಿ ಅಲ್ಲಿಂದ ಹಿಮಾಲಯದ ಬಾಬಾ ಗುಹೆಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲಿ ರಜನಿ ತನ್ನ ಸ್ನೇಹಿತರ ಜೊತೆ ಶಾಂತ, ಸ್ವಚ್ಛಂದ, ತಿಳಿನೀಲಿ ಆಕಾಶದ ತಳದಲ್ಲಿ , ಪ್ರಕೃತಿ ಮಡಿಲಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.ಅವರು ಆಧ್ಯಾತ್ಮಿಕ ಪರಿಸರದಲ್ಲಿರುವ ಸಮಾಧಿ ದಯಾನಂದ ಸರಸ್ವತಿ ಸಮಾಧಿಗೆ ಭೇಟಿ ನೀಡಿದರು. ರಜನಿಕಾಂತ್ ಹಿಮಾಲಯಕ್ಕೆ ಹೋಗುತ್ತಿರುವುದು ಇದೇ ಮೊದಲಲ್ಲ. ನಾನು ಅನೇಕ ಬಾರಿ ಅಲ್ಲಿಗೆ ಹೋಗಿದ್ದೇನೆ. ಹಿಮಾಲಯಕ್ಕೆ ಹೋದರೆ ಖುಷಿಯಾಗುತ್ತದೆ ,ಹಿಮಾಲಯವೇ ಶಾಂತಿ, ವಿಜಯ ಹಾಗೂ ಸಂತೋಷದ ತಾಣ ಎಂದು ರಜನಿಕಾಂತ್ ಹೇಳಿಕೊಂಡಿದ್ದಾರೆ. ಅಲ್ಲಿ ರಜನೀಕಾಂತ್ ಐಶಾರಾಮಿ ಜೀವನ ತ್ಯಜಿಸಿ ಸರಳವಾಗಿ ಬದುಕುತ್ತಿದ್ದಾರೆ.
ಕೊಯಮತ್ತೂರಿನ ಸಚ್ಚಿದಾನಂದ ಸ್ವಾಮಿ ಅವರು ನಟ ರಜನಿಕಾಂತ್ ಅವರನ್ನು ಬಾಬಾಗೆ ಪರಿಚಯಿಸಿದರು. ಅಂದಿನಿಂದ ರಜನಿಕಾಂತ್ ಹಿಮಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ರಜನಿಕಾಂತ್ ಅವರು ೧೯೯೭ ಮತ್ತು ೧೯೯೮ ರಲ್ಲಿ ಮೊದಲ ಬಾರಿಗೆ ಹಿಮಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು. ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗೋದು, ಹಿಮಾಲಯಕ್ಕೆ ಹೋಗುವಾಗ ಹೃಷಿಕೇಶದ ಆಶ್ರಮದಲ್ಲಿ ಉಳಿದುಕೊಳ್ಳುವುದು ಸಾಮಾನ್ಯ ರಜನಿಕಾಂತ್ ಮೊದಲಿನಿಂದಲೂ ತಮ್ಮ ಆಧ್ಯಾತ್ಮಿಕ ಪಯಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ೨೦೧೧ ರಲ್ಲಿ ಅವರು ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಹಿಮಾಲಯದ ಚಾರಣವನ್ನು ತಪ್ಪಿಸಿದರು. ಸುಮಾರು ೮ ವರ್ಷಗಳಿಂದ ಹಿಮಾಲಯಕ್ಕೆ ಹೋಗಿಲ್ಲ. ರಜನಿಕಾಂತ್ ಸಿನಿಮಾಗಳ ವಿಚಾರಕ್ಕೆ ಬಂದರೆ, ಸತತ ಸೋಲು ಕಂಡಿದ್ದ ಸೂಪರ್ ಸ್ಟಾರ್ ಗೆ ಜೈಲರ್ ಯಶಸ್ಸು ನೀಡಿದೆ.