ಜೈಪುರ ಶಾಲೆಗಳಿಗೆ ಬಾಂಬ್ ಬೆದರಿಕೆ.

ಜೈಪುರ. ಮೇ- ೧೩ ರಾeಸ್ಥಾನದ ರಾಜಧಾನಿಯಾದ ಜೈಪುರ್ ನಲ್ಲಿನ ೪ ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ.
ತಕ್ಷಣವೇ ಸ್ಥಳಕ್ಕೆ ಪೊಲೀಸರು ತಂಡವು ಬಾಂಬ್ ನಿಷ್ಕ್ರಿಯದಳವು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗವನ್ನು ತೆರವುಗೊಳಿಸಿದರು.
“ಇದೆ ತರಹದ ಬಾಂಬ್ ಬೆದರಿಕೆ ಸಂದೇಶಗಳು ದೆಹಲಿಯ ಶಾಲೆಗಳಿಗೆ , ಬೆದರಿಕೆ ಕರೆ ಹೀಗಾಗಿ ಬಂದಿದೆ ಭಯದ ವಾತವರಣವನ್ನು ಸೃಷ್ಟಿಸಿದೆ” ಎಂದು ಜೈಪುರ್‌ನ ಪೊಲೀಸ್ ಕಮೀಷನರ್ ಬಿಜು ಜಾರ್ಜ್ ಜೋಸೆಫ್ ರವರು ತಿಳಿಸಿದ್ದಾರೆ. ಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ನಮ್ಮ ತಂಡವು ಪ್ರಯತ್ನಿಸುತ್ತಿದೆ, ದೆಹಲಿಯ ಶಾಲೆಗಳಿಗೆ ರಷ್ಯಾ ಮೂಲದ ಸಂಸ್ಥೆ ಮೂಲಕ ಇಮೇಲ್ ಬೆದರಿಕೆ ಂದಿದೆ. ಆಸ್ಪತ್ರೆಗಳಿಗೂ ಸಹ ಭಾನುವಾರದಂದು ಇಮೇಲ್‌ಗಳು ಬಂದಿದ್ದು, ಇದರ ಮೂಲವು ಯೂರೋಪ್‌ನ ಬೀಬಲ್ ಡಾಟ್ ಕಾಮ್’ಎಂಬ ಸಂಸ್ಥೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇಮೇಲ್‌ನ ಪ್ರತಿಯನ್ನು ಪಿ.ಟಿ.ಐ ಗೆ ರವಾನಿಸಿದ್ದಾರೆ.
ಸೈಬರ್ ಅಧಿಕಾರಿಗಳ ತಂಡವು ಮೇಲ್ ಐಡಿ ಯ ವಿಳಾಸವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.