ಜೈನ ಸಾತ್ವಿಕ ಚಾತುರ್ಮಾಸ್ಯ ಪ್ರವಚನ ಕಾರ್ಯಕ್ರಮ

ಅರಸೀಕೆರೆ, ಜು. ೨೧- ಜೈನ್ ಸ್ಥಾನಕ್ ಭವನದಲ್ಲಿ ಜೈನ ಸಾತ್ವಿಕ ಚಾತುರ್ಮಾಸ್ಯ ಪ್ರವಚನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಸಾಧ್ವಿಗಳ ದರ್ಶನ ಪಡೆದರು.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಜೈನ ಧರ್ಮ ಪ್ರಾಚೀನವಾದದ್ದು. ಅಹಿಂಸೆ ಜೈನ ಧರ್ಮದ ಮೂಲ ಸಿದ್ಧಾಂತ. ಈ ಸಿದ್ಧಾಂತದ ಅಡಿಯಲ್ಲಿ ಅನೇಕ ಜೈನ ಮುನಿಗಳು ಈ ಚಾತುರ್ಮಾಸ್ಯ ಕಾಲದಲ್ಲಿ ಭಕ್ತರ ಜೀವನದ ಕಲ್ಯಾಣ ಮಾಡುವ ಸಾಧನೆ ಮಾಡುತ್ತಾರೆ. ಧರ್ಮದಲ್ಲಿ ಸೂಕ್ಷ್ಮ ಜೀವ ರಕ್ಷಣೆಗಾಗಿ ಮೊದಲಿನಿಂದಲೇ ಬಾಯಿಗೆ ಬಟ್ಟೆ ಕಟ್ಟುವ ಪರಂಪರೆ ಇದೆ. ಜೈನ ಸಮಾಜ ಶಾಂತಿಯುತ ಸಮಾಜವಾಗಿದೆ. ಅನೇಕ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೈನ್ ಕಾನ್ಫರೆನ್ಸ್ ಯುವ ಶಾಖೆ ರಾಜ್ಯ ಉಪಾಧ್ಯಕ್ಷರಾದ ಚೇತನ್ ಜೈನ್, ಸಂಘದ ಮಾಜಿ ಅಧ್ಯಕ್ಷರಾದ ಮಹಾವೀರ್ ಮೋಹರ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾದ ಮೋಹನ್ ಲಾಲ್, ಆನಂದ ಜೈನ್, ಶಾಂತಿಲಾಲ್, ಮದನ್ ಲಾಲ್, ಪಾರಸ್ ಜೈನ್, ಅಮರ್ ಚಂದ್ ಜೈನ್, ಗಣೇಶ್ ಚೋಪ್ರಾ, ಚೇತನ್ ಮೋಹರ, ಅಶೋಕ್ ಮೋಹರ, ಡಾ. ರೋಶನ್ ಲಾಲ್, ಸುನಿಲ್ ಚೋಪ್ರಾ, ನರೇಶ್ ಮತ್ತಿತರರು ಉಪಸ್ಥಿತರಿದ್ದರು.