ಜೈನ ಸಮುದಾಯದಿಂದ 65 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್

ದಾವಣಗೆರೆ: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆಕ್ಸಿಜನ್ ಬೆಡ್, ನಾರ್ಮಲ್ ಬೆಡ್ ವ್ಯವಸ್ಥೆ ಕೂಡ ಕಡಿಮೆಯಾಗ್ತಿದೆ. ಇದನ್ನು ಮನಗಂಡ ದಾವಣಗೆರೆ ಜೈನ ಸಮುದಾಯ ಆರೋಗ್ಯ ಸೇವೆ ನೀಡಬೇಕು ಎಂದು ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಿದ್ದು, ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕೊಂಚ ಕಡಿಮೆ ಮಾಡಿದೆ.ಇದಕ್ಕಾಗಿಯೇ ನಗರದ ಆವಗೆರೆಯ ಜೈನ ದೇವಸ್ಥಾನದ ಬಳಿ 65 ಹಾಸಿಗೆಯ ಕೋವಿಡ್ ಸೆಂಟರ್ ತೆರೆದಿದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದೆ.ಸೋಂಕಿತರಿಗೆ ಬೇಕಾದಂತ ಬೆಡ್ ವ್ಯವಸ್ಥೆ, ಆಕ್ಸಿಜನ್, ಔಷದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೇ ಸೋಂಕಿತರಿಗೆ ಪಲ್ಸ್ ರೇಟ್ ಚೇಕ್ ಮಾಡಲು ಆಕ್ಸಿಮೀಟರ್, ಇದ್ದು ನಾಲ್ಕು ಜನ ನುರಿತ ವೈದ್ಯರು ನಾಲ್ಕು ನರ್ಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೆಂಟರ್‌ನಲ್ಲಿ ಯಾರಿಗಾದ್ರೂ ಹೆಚ್ಚಿನ ಚಿಕಿತ್ಸೆ ಬೇಕಾದ್ರೂ ದಾವಣಗೆರೆಯ ಎಸ್ ಎಸ್ ಹೈಟೆಕ್, ಬಾಪುಜಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಊಟದಿಂದ ಹಿಡಿದು ಆಟದವರೆಗೂ ವ್ಯವಸ್ಥೆ ಮಾಡಲಾಗಿದೆ.