ಜೈನ ಸಮುದಾಯಕ್ಕೆ ಬೈಡೆನ್ ಶುಭಾಶಯ

ವಾಷಿಂಗ್ಟನ್, ಏ.೨೨-ಮಹಾವೀರ ಜಯಂತಿ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಜೈನ ಧರ್ಮೀಯರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಬಾಲ್ಯದಲ್ಲಿ ವರ್ಧಮಾನ ಎಂದು ಕರೆಯಲ್ಪಡುತ್ತಿದ್ದ ಭಗವಾನ್ ಮಹಾವೀರರ ಹುಟ್ಟಿದ ಹಬ್ಬವನ್ನು ಮಹಾವೀರ ಜಯಂತಿಯಾಗಿ ಆಚರಿಸಲಾಗುತ್ತದೆ. ಮಹಾವೀರರು ಕ್ರಿಸ್ತಪೂರ್ವ ೬೧೫ರಲ್ಲಿ ರಾಜವಂಶದಲ್ಲಿ ಜನಿಸಿದ್ದರು. ಪ್ರೀತಿ, ಸಂತಸ ಮತ್ತು ಸಾಮರಸ್ಯವನ್ನು ಹರಡುವ ಮಹಾವೀರ ಸ್ವಾಮಿಯವರ ಮೌಲ್ಯಗಳನ್ನು ಗುರುತಿಸಿ ಗೌರವಿಸೋಣ ಎಂದು ಹೇಳಿದ್ದಾರೆ.
ಬಾಲ್ಯದಲ್ಲಿ ವರ್ಧಮಾನ ಎಂದು ಕರೆಯಲ್ಪಡುತ್ತಿದ್ದ ಭಗವಾನ್ ಮಹಾವೀರರ ಹುಟ್ಟಿದ ಹಬ್ಬವನ್ನು ಮಹಾವೀರ ಜಯಂತಿಯಾಗಿ ಆಚರಿಸಲಾಗುತ್ತದೆ. ಮಹಾವೀರರು ಕ್ರಿಸ್ತಪೂರ್ವ ೬೧೫ರಲ್ಲಿ ರಾಜವಂಶದಲ್ಲಿ ಜನಿಸಿದ್ದರು.
ವರ್ಧಮಾನ ಬೆಳೆಯುತ್ತಾ ರಾಜನ ಸ್ಥಾನಮಾನವನ್ನು ಧಿಕ್ಕರಿಸಿ, ೩೦ನೇ ವಯಸ್ಸಿನಲ್ಲಿ ಸತ್ಯ ಮತ್ತು ಜ್ಞಾನವನ್ನು ಅರಸುವ ಆಧ್ಯಾತ್ಮಿಕ ಪಯಣ ಆರಂಭಿಸಿದರು. ೧೨ ವರ್ಷ ಕಾಲ ಅರಣ್ಯದಲ್ಲಿ ಧ್ಯಾನ ಕೈಗೊಂಡು ಕೈವಲ್ಯ ಜ್ಞಾನವನ್ನು ಸಂಪಾದಿಸಿ ಬಳಿಕ ಜೈನಧರ್ಮವನ್ನು ಪ್ರಚುರಪಡಿಸಿದ್ದರು.