ಜೈನ ಸಮಾಜದ ಚಾತುರ್ಮಾಸ್ಯದ ಪ್ರವಚನ

ಕಲಬುರಗಿ,ಸೆ.9-ಇಲ್ಲಿನ ಅರಿಹಂತ ನಗರದಲ್ಲಿ ಜರಗುತ್ತಿರುವ ಜೈನ ಮಹಾಗುರುಗಳ 12 ನೇ ಚಾತುರ್ಮಾಸ್ಯದ ಪ್ರವಚನ ಕಾರ್ಯಕ್ರಮದಲ್ಲಿ 9 ನೆ ದಿನದ ಉಪನ್ಯಾಸ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ನಾಡು ಶರಣರು, ಸಂತರು ನಡೆದಾಡಿದ ಪುಣ್ಯ ಭೂಮಿ. ಜೈನ ಸಮಾಜದ ಪ್ರತಿಯೊಂದು ಕಾರ್ಯದಲ್ಲಿ ನಾನು ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳಲು ಹಾಗೂ ಸೇವೆಗೆ ಅವಕಾಶ ನೀಡಿದ ಸಮಾಜ ಭಂದುಗಳಿಗೆ ಆಭಾರಿ ಯಾಗಿರಿತ್ತೇನೆ ಎಂದು ತಿಳಿಸಿದರು. ಪುಣೆಯ ಜೈನ ಸಮಾಜದ ಹಿರಿಯರು ಧರ್ಮದ ಬಗ್ಗೆ ಉಪನ್ಯಾಸ ನೀಡಿದರು,
ಮಹಾಸಭಾದ ಕಾರ್ಯಕಾರಣಿ ಸದಸ್ಯರಾದ ಜೇನವೆರಿ ವಿನೋದ ಕುಮಾರ, ಆಳಂದ ತಾಲೂಕಿನ ಹಿರಿಯ ಸಮಾಜ ಸೇವಕರಾದ ಚಂದ್ರಮೋಹನ ಶಾಹ, ಕಲಬುರಗಿಯ ಮಹಾಧಾನಿ ನೇಮಿನಾಥ ಬೇಳಕೆರಿ ಹಾಗೂ ನ್ಯಾಯವಾದಿ ಹಾಗೂ ಕರ್ನಾಟಕ ಜೈನ ಸಂಘದ ಕಾರ್ಯಕಾರಣಿ ಸದಸ್ಯ ಬಿ.ಕೆ.ಪಾಟೀಲ ಉಪಸ್ಥಿತರಿದ್ದರು. ನಂತರ ಪ್ರಸಂಗ ಸಾಗರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಉಪಸ್ಥಿತರಿದ್ದು ಮಹಾಗುರುಗಳಿಗೆ 11 ನೇ ಶತಮಾನದ ವೀರಶೈವ ಧರ್ಮದ ಪ್ರಸಾರಕರಾದ ದಾಸಿಮಯ್ಯ ನವರ ಬಗ್ಗೆ ತಿಳಿಸಿದರು ಆಗಿನ ಜೈನ ಮಹಾರಾಣಿ ಸುಗ್ಗಳ್ಳ ದೇವಿ ಯವರಿಗೆ ಲಿಂಗ ದೀಕ್ಷೆ ನೀಡಿದ ಕುರಿತು ಮಾಹಿತಿ ನೀಡಿದರು, ಪ್ರಸ್ತುತ ಸೌಹಾರ್ದತೆಯ ನಡೆ ಅತಿ ಅವಶ್ಯಕತೆ ಇದೆ ಎಂದು ತಿಳಿಸಿದರು. ಜೈನ ಸಮಾಜದ ಭಕ್ತರು ಹಾಗೂ ಮಹಿಳಾ ಸಾಧಕಿಯರು, ಸಮಾಜದ ಗಣ್ಯರು ಪಾಲ್ಗೊಂಡಿದ್ದರು.