ಜೈನ ಸಂಪುಟ ಹೊರ ಬಂದದ್ದು ಶ್ಲಾಘನೀಯ : ಡಾ. ಹಂಪ ನಾಗರಾಜಯ್ಯ

ಹೊಸಪೇಟೆ ಏ26: ಕನ್ನಡ ವಿಶ್ವವಿದ್ಯಾಲಯದ ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠ, ಜೈನ ಸಂಪುಟಗಳನ್ನು ಹೊರ ತರುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ನಾಡೋಜ ಡಾ. ಹಂಪ ನಾಗರಾಜಯ್ಯ ಶ್ಲಾಘೀಸಿದರು.
ಕನ್ನಡ ವಿಶ್ವವಿದ್ಯಾಲಯದ ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠದ ವತಿಯಿಂದ ಮಹಾವೀರರ ಜಯಂತಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಆನ್‍ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಕೃತದಲ್ಲಿ ಮಹಾವೀರನನ್ನು ಜ್ಞಾನಿ, ತತ್ವಜ್ಞಾನಿ, ಸರ್ವಜ್ಞ, ಎಲ್ಲವನ್ನು ತಿಳಿದವನು ದೇಶದ ಉದ್ದಗಲಕ್ಕೂ ಸಂಚರಿಸಿ ಜನರಿಗೆ ತಿಳುವಳಿಕೆ ನೀಡಿದರು ಎಂದ ಅವರು ಮಹಾವೀರರು ಸಂಸಾರವನ್ನು ತೊರೆದು ದೀರ್ಘಕಾಲ ತಪಸ್ಸನ್ನು ಮಾಡಿ ಜ್ಞಾನವನ್ನು ಸಂಪಾದಿಸಿದರು ಎಂದು ವಿವರಿಸಿದರು.
ಕುಲಪತಿ ಡಾ.ಸ.ಚಿ.ರಮೇಶ ಮಾತನಾಡಿ, ಮಹಾವೀರರು ಇಡೀ ದೇಶಕ್ಕೆ ನೀಡಿದ ಕೊಡುಗೆಯ ವಿವರವನ್ನು ಜೈನ ಪುರಾಣದಲ್ಲಿ ಬರುವ ಗ್ರಂಥಗಳಲ್ಲಿ ವಿವರಿಸಲಾಗಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹಾವೀರ ಅವರ ಕೊಡುಗೆ ಅಪಾರವಾದದು ಎಂದರು.
ಆನ್‍ಲೈನ್ ವಿಶೇಷ ಉಪನ್ಯಾಸ ನೀಡಿದ ಲೇಖಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಕನ್ನಡ ಸಲಹಾ ಸಮಿತಿ, ನವದೆಹಲಿ ಡಾ.ಪದ್ಮಿನಿ ನಾಗರಾಜ ಅವರು ಜೈನ ಧರ್ಮ ವಿಶ್ವಧರ್ಮ. ಈ ಕಾರ್ಯಕ್ರಮವನ್ನು ಮೆರಗು ನೀಡಿದ ಕನ್ನಡ ವಿಶ್ವವಿದ್ಯಾಲಯದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘೀಸಿದರು. ಜೈನಧರ್ಮ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳಿರುವಾಗ ಮನುಷ್ಯ ಧರ್ಮದ ಹೆಸರಿನಲ್ಲಿ ಮನುಷ್ಯ ಬೇಡವಾದ್ದನ್ನು ಮಾಡಲು ಹೊರಟಿದ್ದಾನೆ. ಅದರ ಪ್ರತಿಫಲವಾಗಿ ಇಂದು ಜಗತ್ತು ಕೋವಿಡ್-19ನಿಂದ ನಲುಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಅಭೇರಾಜ್ ಬಲ್ಡೋಟ ಜೈನ ಅಧ್ಯಯನ ಪೀಠದ ಸಂಚಾಲಕ ಡಾ.ಎಲ್.ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ದರ್ಪಣ ಗಣಕ ಕೇಂದ್ರದ ಸಹಾಯಕ ನಿರ್ದೇಶಕ ವಿಜಯೇಂದ್ರ ಎಸ್.ಕೆ. ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.