ಜೈನ ಯುವಕರಿಂದ ಪಟಾಕಿ ಹಣ ಸಾಮಾಜಿಕ ಕಾರ್ಯಕ್ಕೆ:

ಕೊಟ್ಟೂರು ನ 15 :ದೀಪಾವಳಿ ಹಬ್ಬವೆಂದರೆ ಪಟಾಕಿ ಸಿಡಿಸುವುದೇ ಕೆಲವರಿಗೆ ಪ್ರಮುಖ.ಮನ ಬೆಳಗುವ ಈ ಹಬ್ಬವನ್ನು ಕೊಟ್ಟೂರಿನ ಜೈನ ಸಮುದಾಯ ಯುವಕ ಯುವತಿಯರು ಮತ್ತು ಸಣ್ಣ ಪುಟಾಣಿಗಳು ಪಟಾಕಿ ಖರೀದಿಗೆಂದು ಮನೆಯವರು ನೀಡಿದ ಹಣವನ್ನು ಬಡ ಬಗ್ಗರಿಗೆ ಹಣ್ಣು ಹಂಪಲ ಸಿಹಿ ವಿತರಿಸಲು ಬಳಸಿಕೊಂಡು ದೀಪಾವಳಿಯನ್ನು ಹೀಗೂ ಆಚರಿಸಬಹುದೆಂಬುದನ್ನು ತೋರಿಸಿ ತಮ್ಮ ವಿಶಿಷ್ಟತೆಯನ್ನು ಮೆರೆದಿದ್ದಾರೆ.
ಪಟಾಕಿ ಹಣವನ್ನು ಕಳೆದ 8ವರ್ಷಗಳಿಂದ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಬಡ ಮತ್ತು ತುಳಿತಕ್ಕೆ ಒಳಗಾದ ಜನರ ನೆರವಿಗೆ ತೊಡಗಿಸಿಕೊಂಡು ಅವರಲ್ಲಿ ಹಬ್ಬದ ಸಡಗರ ಸಂಭ್ರಮ ಕಾಣುತ್ತಾರೆ.
ಜೈನಸಮುದಾಯದ ಮಹಾವೀರ ಮಂಡಳಿ ಮತ್ತು ಕುಶಾಲ ಬಾಲಿಕ ಮಂಡಳಿಯು ಕೊಟ್ಟೂರು ಪಟ್ಟಣದ 5ರಿಂದ 22ವರ್ಷದ ವಯಸ್ಸಿನ ಸುಮಾರು 30 ಯುವಕ ಯುವತಿಯರು ಈ ಬಗೆಯ ಕಾರ್ಯಕ್ರಮದತ್ತ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರೂ40 ರಿಂದ 50 ಸಾವಿರ ಹಣವನ್ನು ಈ ಜೈನ ಸಮುದಾಯದ ಯುವಕರು ವ್ಯಹಿಸಿದರು.