ಕಾಳಗಿ.ಜು.10. ಬೆಳಗಾವಿ ಜಿಲ್ಲೆಯ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯ ಸುದ್ದಿ ತೀರ್ವ ಆಘಾತವುಂಟುಮಾಡಿದೆ. ಸಾಧು ಸಂತರ ಮೇಲಿನ ಇಂತಹ ಕ್ರೌರ್ಯಗಳು ನಿಜಕ್ಕೂ ಕಳವಳಕಾರಿ ಸಂಗತಿ.
ಆಘಾತದಲ್ಲಿರುವ ಸಮಸ್ತ ಜೈನ ಸಮುದಾಯದ ಬಂಧುಗಳ ನೋವಿನಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ ಜಗತ್ತಿಗೆ ಅಹಿಂಸೆ ಮತ್ತು ಶಾಂತಿ ಭೋಧನೆಯ ಜೊತೆಗೆ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳಿಗೂ ತೊಂದರೆ ಬಯಸದ … ಜೈನ ಧರ್ಮ. ಇಂತಹ ಸಂಪ್ರದಾಯ ಪಾಲಿಸುವ ಮುನಿಗಳ ಹತ್ಯೆ ನಾಗರಿಕ ಸಮಾಜಕ್ಕೆ ಕಳಂಕ ಮತ್ತು ಶಾಪ .
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಘಟನೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ತೀಕ್ಷ್ಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಬೇಕು ಜೈನ ಮುನಿ ಹತ್ಯೆ ಸಿಬಿಐ ತನಿಖೆ ನೀಡಿ.
ಈ ಪ್ರಕರಣದಲ್ಲಿ ಯಾರು ಭಾಗಿಗಳಿದ್ದಾರೋ ಅವರಿಗೆ ಗಲ್ಲು ಶಿಕ್ಷೆ ನೀಡಬೇಕು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಜೈನ ಮೂನಿಗಳ ಸಹೋದ್ಯೋಗಿಗಳಿಗೆ ಜೈನ್ಯ ಮುನಿಗಳಿಗೆ ಭದ್ರತೆ ನೀಡಬೇಕು ಎಂದು ರಟಕಲ್ ವಿರಕ್ತ ಮಠ ಶ್ರೀಗಳಾದ ಸಿದ್ದರಾಮ ಶ್ರೀಗಳು ಹೇಳಿದರು.