
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.12: ಚಿಕ್ಕೋಡಿ ತಾಲೂಕು ಹಿರೇಕೋಡಿಯ ಜೈನ ಮುನಿ ಕಾಮಕುಮಾರ ಮಹಾರಾಜರ ಹತ್ಯೆ ಖಂಡಿಸಿ ಇಲ್ಲಿನ ಜೈನ ಸಮಾಜದ ಮುಖಂಡರು ತಾಲೂಕು ಕಚೇರಿ ಬಳಿ ಪ್ರತಿಭಟಿಸಿದರು.
ಜೈನ ಮುನಿಯ ಬರ್ಬರ ಹತ್ಯೆಯಿಂದ ಜೈನ ಸಮಾಜಕ್ಕೆ ಆಘಾತವಾಗಿದೆ. ಜೈನ ಮುನಿಗಳು ಅಪಾಯದ ನಡುವೆ ಧರ್ಮ ಪಾಲನೆ ಮಾಡುವಂತಾಗಿದೆ. ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತವಾಗಿರುವ ಜೈನರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು. ಜೈನಮುನಿ ಹತ್ಯೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಜೈನ್, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಜೈನ್ ಮಿಲನ್ ಅಧ್ಯಕ್ಷ ಸಂತೋಷ ಜೈನ್, ಜೈನ ಸಮಾಜದ ಮುಂಡರಾದ ಡಾ. ಎಂ.ಧರ್ಮಣ್ಣ, ಪಾರ್ಶ್ವನಾಥ, ಎಂ.ತವನಪ್ಪ, ಪದ್ಮರಾಜ ಜೈನ್, ಅಜಿತ್, ರಾಯಪ್ಪ, ಪ್ರಸನ್ನ, ಬೊಮ್ಮಣ್ಣ, ಬಾಗೇಶ ಜೈನ್, ಪದ್ಮಾವತಿ, ಜಯಶ್ರೀ, ಚಂಪಾವತಿ ಇತರರು ಇದ್ದರು.
ಜೈನಮುನಿಗೆ ಶ್ರದ್ದಾಂಜಲಿ : ಪಟ್ಟಣದ ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಜೈನ ಮುನಿ ಕಾಮಕುಮಾರ ಮಹಾರಾಜರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಜೈನ ಸಮಾಜದ ಮುಖಂಡರು ಭಾಗವಹಿಸಿದ್ದರು.