ಜೈನ ಮುನಿ ಹತ್ಯೆ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. 12 ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ, ಮಂಗಳವಾರ
ಶಿವಮೊಗ್ಗ ನಗರದ ಡಿಸಿ ಕಚೇರಿ ಆವರಣದಲ್ಲಿ ದಿಗಂಬರ ಜೈನ ಸಂಘದಿಂದ ಪ್ರತಿಭಟನಾನಡೆಸಲಾಯಿತು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರಅರ್ಪಿಸಲಾಯಿತು.ಅಹಿಂಸೆ,ಶಾಂತಿ ಪ್ರತಿಪಾದಿಸುವ ಜೈನ ಮುನಿಗಳನ್ನು ಅಪಹರಣ ಮಾಡಿ ಅತ್ಯಂತ ಅಮಾನುಷವಾಗಿಹತ್ಯೆ ಮಾಡಿರುವುದು ಆತಂಕಕಾರಿ ಸಂಗತಿಯಾಗಿದೆ.ಇದೊಂದು ಹೇಯ ಕೃತ್ಯವಾಗಿದ್ದು, ಸರ್ವಥಾ ಖಂಡನಾರ್ಹವಾದುದಾಗಿದೆ. ಈ ಘಟನೆಯು ಜೈನಸಮಾಜದಲ್ಲಿ ಅತೀವ ನೋವುಂಟು ಮಾಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.ಜೈನ ಮುನಿಗಳ ಹತ್ಯೆ ಆರೋಪಿಗಳ ವಿರುದ್ದ ಶೀಘ್ರಗತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು.ಜೈನ ಸಮಾಜದ ಸಾಧುಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಂಘಟನೆಯು ರಾಜ್ಯಸರ್ಕಾರಕ್ಕೆ ಆಗ್ರಹಿಸಿದೆ.