ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 11:- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಜೈನ ಮುನಿಗಳಾದ ಶ್ರೀ 108 ಕಾಮಕುಮಾರ ನಂದಿ ಮುನಿರಾಜರನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಶ್ರೀ ಪಾಶ್ರ್ವನಾಥ ಜೈನ ಸಂಘ ನಗರದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಪರ ಜಿಲ್ಲಾಧಿಕಾರಿಗಳಾದ ಗೀತಾ ಹಡೇದ ಅವರ ಕಚೇರಿಗೆ ಶ್ರೀ ಪಾಶ್ರ್ವನಾಥ ಜೈನ ಸಂಘದ ಆಧ್ಯಕ್ಷ ಎಂ.ಪಿ. ನಿರ್ಮಲಕುಮಾರ್ ಹಾಗೂ ಪಧದಿಕಾರಿಗಳು ತೆರಳಿ ಮನವಿ ಸಲ್ಲಿಸಿದರು. ಕೂಡಲೇ ನಮ್ಮ ಮನವಿ ಪತ್ರವನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ರವಾನೆ ಮಾಡಬೇಕೆಂದು ಆಗ್ರಹಿಸಿದರು.
ಶ್ರೀ ಕಾಮಕುಮಾರನಂದಿ ಮಹಾರಾಜರ ಹತ್ಯೆಯು ಜೈನ ಸಮಾಜಕ್ಕೆ ಅತೀವ್ರವಾದ ದುಃಖವನ್ನು ತಂದಿದೆ. ಅಹಿಂಸಾ ಪರಮೋದರ್ಮ ಎಂದು ವಿಶ್ವಕ್ಕೆ ಸಾರಿರುವ ಅಲ್ಪ ಸಂಖ್ಯಾತ ಜೈನರಿಗೆ ಈ ಅಮಾನೀಯ ಘಟನೆ ಅತ್ಯಂತ ದಿಗ್ಬ್ರಮೆ ಹಾಗೂ ಅಸುರಕ್ಷತೆಯ ಭಾವವನನು ಮೂಡಿಸಿದೆ. ಮುನಿಗಳನ್ನು ಕ್ರೂರವಾಗಿ ಹತ್ಯೆ ಮಾಡಿರುವ ಕೊಲೆಕಡುಕರಿಗೆ ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸುತ್ತೇವೆ.
ಜೈನಮುನಿಗಳು ಭಾರತದಾದ್ಯಂತ ನಿರ್ಭಯವಾಗಿ ವಿಹಾರ ಮಾಡಲು ಹಾಗು ರಕ್ಷಣೆಯನ್ನು ಸರ್ಕಾರವು ನೀಡಬೇಕು. ಚಾಮರಾಜನಗರ ಕನಕಗಿರಿ ಜೈನ್ ಕ್ಷೇತ್ರಕ್ಕೂ ಜೈನ ಮುನಿಗಳು ಆಗಿಂದಾಗ್ಗೆ ಆಗಮಿಸುತ್ತಿರುತ್ತಾರೆ. ಜೈನ ಮುನಿಗಳು ಎಲ್ಲೇ ಸಂಚಾರ ಮಾಡಿದರು ಕಾಲ್ನಡಿಗೆಯಲ್ಲಿ ವಿಹಾರ ಮಾಡುತ್ತಾರೆ. ಇವರುಗಳ ರಕ್ಷಣೆ ಸಮಾಜ ಹಾಗು ಸರ್ಕಾರ ಕರ್ತವ್ಯವಾಗಿರುತ್ತದೆ. ಜೈನ ಮುನಿಗಳು ಅಹಿಂಸೆಯನನು ಅತಿ ಸೂಕ್ಷ್ಮಾನುವಾಗಿ ಸಕಲ ಪ್ರಾಣಿಗಳಿಗೂ ಸಹ ಜೀವ ಹಿಂಸೆಯನ್ನು ಬಯಸದೇ ತಮ್ಮ ಪಿಂಚದಿಂದ ಎಲ್ಲಿ ಕುಳಿತುಕೊಳ್ಳಬೇಕಾದರೂ ಶುದ್ದಿಯನ್ನು ಮಾಡಿ ಆಚರಣೆ ಮಾಡುತ್ತಾರೆ.
ಸರ್ಕಾರದ ಪ್ರತಿನಿಧಿಗಳಾದ ತಾವು ಮುಂದೆ ಇಂಥ ಘಟನೆಗಳು ಮುರುಕಳಿಸದಂತೆ ಜೈನಮುನಿಗಳಿಗೆ ಹಾಗೂ ಜೈನ ಸಮಾಜಕ್ಕೆ ರಕ್ಷಣೆಯನ್ನು ಕೊಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿ.ಬಿ. ನಾಗೇಂದ್ರಯ್ಯ, ಕಾರ್ಯದರ್ಶಿ ಸಿ.ಪಿ. ಮಹೇಶ್‍ಕುಮಾರ್, ಖಜಾಂಚಿ ಸಿ.ಎನ್. ನಾಗರತ್ನರಾಜು, ಮಾಜಿ ಅಧ್ಯಕ್ಷ ಸುರೇಶ್‍ಕುಮಾರ್, ಸತೀಶ್, ಕುನ್ನಾಯ್ಯಲಾಲ್ ಜೈನ್, ಗಣಪತಿಲಾಲ್, ಡಿ.ಪಿ. ಉಲ್ಲಾಸ್ ಮೊದಲಾಧವರು ಇದ್ದರು.