
ಚಾಮರಾಜನಗರ, ಮಾ.25:- ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಪೀಠಾದ್ಯಕ್ಷರಾದಪರಮಪೂಜ್ಯಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಜಿನಕ್ಯರಾದ ಪ್ರಯುಕ್ತಚಾಮರಾಜನಗರದ ಶ್ರೀ ಪಾಶ್ರ್ವನಾಥ ದಿಗಂಬರಜೈನ ಬಸದಿಯಲ್ಲಿ ಪೂಜ್ಯ ಗುರುಗಳಿಗೆ ಭಕ್ತಿ ವಿನಯಾಂಜಲಿಯನ್ನುಚಾಮರಾಜನಗರದ ಸಮಸ್ತ ಜೈನ ಸಮಾಜದ ಭಾಂದವರು ಸಮರ್ಪಿಸಿದರು.
ಈ ಸಂಧರ್ಭದಲ್ಲಿಜೈನ ಸಂಘದ ಹಿರಿಯ ಮುಖಂಡರಾದ ಸಿ.ಎನ್.ನಾಗರತ್ನರಾಜು ಮಾತನಾಡಿ, ಪರಮಪೂಜ್ಯಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಅಹಿಂಸಾ ತತ್ವವನ್ನು ಬೋಧಿಸಿಕೊಂಡು ಬಂದವರು. ಜೈನಧರ್ಮವನ್ನು ನಾಡಿನಾದ್ಯಂತ ಪ್ರಚುರಪಡಿಸಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದ್ದರು. ಅವರ ನಿಧನ ಜೈನ ಧರ್ಮಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ಶ್ರೀಗಳ ಕಾರ್ಯವನ್ನು ಸ್ಮರಿಸಿದರು.
ಶ್ರೀ ಪಾಶ್ರ್ವನಾಥ ದಿಗಂಬರ ಜೈನ ಸಂಘದ ಸರ್ವಸದಸ್ಯರು, ಶ್ರೀ ಜಯಶ್ಯಾಮಾದೇವಿ ಜೈನ ಮಹಿಳಾ ಸಮಾಜದ ಸರ್ವಸದಸ್ಯರು ಹಾಗೂ ಭಾರತೀಯ ಜೈನ ಮಿಲನ್ ಸದಸ್ಯರು, ಎಂಪಿ ನಿರ್ಮಲ್‍ಕುಮಾರ್, ಸಿ.ಬಿ.ನಾಗೇಂದ್ರಯ್ಯ, ಸಿಪಿ ಮಹೇಶ್‍ಕುಮಾರ್, ಬಿ ವಿಜಯ್, ಸಿ.ಬಿ.ಪದ್ಮಶ್ರೀ, ಪದ್ಮಕಲಾ, ನಿರ್ಮಲಾ, ಅನುರಾಧ, ಲಕ್ಷ್ಮಿ ಮಿಸ್ರಿಲಾಲ್ ಜೈನ್‍ಗಣಪತ್ ಲಾಲ್‍ಜೈನ್ ಮುಖೇಶ್‍ಜೈನ್ ಪ್ರಕಾಶ್ ಜೈನ್ ವಿನಯ್ ಜೈನ್ ಜಿತೇಶ್‍ಜೈನ್ ಉದಯ್ ಜೈನ್ ಉಪಸ್ಥಿತರಿದ್ದರು.