ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

ಹುಬ್ಬಳ್ಳಿ ನ 20 : ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿಗಮಗಳ ಸ್ಥಾಪನೆ ನಿರ್ಧಾರವನ್ನು ಕೈಗೊಂಡಿದ್ದು ಸ್ವಾಗತಾರ್ಹ. ಆದರೆ ರಾಜ್ಯದಲ್ಲಿ ಅತ್ಯಂತ ಅಲ್ಪಸಂಖ್ಯಾತವಾಗಿರುವ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಜೈನ ಸಮಾಜದ ಅಭಿವೃದ್ಧಿಯ ಕಡೆಗೂ ಮುಖ್ಯಮಂತ್ರಿಗಳು ಗಮನಹರಿಸುವ ಮೂಲಕ ಜೈನ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ಆರ್.ಟಿ.ತವನಪ್ಪನವರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲ ಸಮುದಾಯಗಳಂತೆ ಜೈನ ಸಮಾಜದಲ್ಲೂ ಅತ್ಯಂತ ಬೆರಳೆಣಿಕೆಯಷ್ಟು ಜನರು ಮಾತ್ರ ಶ್ರೀಮಂತರಿದ್ದು, ಬಹುಪಾಲು ಜನರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದಳಿದಿದ್ದಾರೆ. ಜೈನ ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿಯೇ ಇದೆ. ಅಲ್ಲದೇ ಭೂ ಮಸೂದೆ ಕಾಯ್ದೆಯಲ್ಲಿ ಜೈನರು ಜಮೀನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಎಂದು ತಿಳಿಸಿದರು.
ಹಿಂದಿನಿಂದಲೂ ಕನ್ನಡ ನಾಡನ್ನು ಪೆÇೀಷಿಸುವಲ್ಲಿ ಜೈನರು ನೀಡಿದ ಕೊಡುಗೆಗಳು ಮಹತ್ತರ. ಇಂದು ಯಾವ ಸೌಲಭ್ಯಗಳೂ ದೊರೆಯದೇ ತೊಂದರೆ ಅನುಭವಿಸುತ್ತಿರುವುದು ಖೇದಕರ ಎಂದರು.
ಹೀಗಾಗಿ ಜೈನ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಅನುದಾನವನ್ನು ಮೀಸಲಿರಿಸಿ, ಸಮುದಾಯದ ಅಭಿವೃದ್ಧಿಗೆ ಶೀಘ್ರವೇ ಅಭಯ ನೀಡಬೇಕು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಮಲ ತಾಳಿಕೋಟಿ, ರಾಜೇಂದ್ರ ಬೀಳಗಿ, ಶಾಂತಿನಾಥ, ಮಹಾವೀರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.