ಜೈನ್ ಸಂಘದಿಂದ ಆಕ್ಸಿಜನ್ ಕಾನ್ಸ್‌ನ್‌ಟ್ರೇಟ್ ಯಂತ್ರ ವಿತರಣೆ

ಅರಕೇರಾ.ಜೂ.೦೫-ಕರೋನ್ ಸೋಂಕು ತಗುಲಿ ಆಕ್ಸಿಜನ ಕೊರತೆಯಿಂದ ಬಳಲುವ ರೋಗಿಗಳ ಅನುಕೂಲಕ್ಕಾಗಿ ಭಾರತೀಯ ಜೈನ್ ಸಂಘಟನೆಬಿಜೆಎಸ್ ಜೈನ್ ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ಹೇಳಿದರು.
ಅವರು ಅರಕೇರಾ ಗ್ರಾಮದಲ್ಲಿನ ನವಜೀವನ ಖಾಸಗಿ ಆಸ್ಪತ್ರೆಯಲ್ಲಿ ಬಿಜೆಎಸ್ ಜೈನ್ ಸಂಘದವತಿಯಿಂದ ಹಮ್ಮಿಕೊಂಡಿದ್ದ ಆಕ್ಸಿಜನ್ ಕಾನ್ಸ್‌ನ್‌ಟ್ರೇಟ್ ಯಂತ್ರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊರೋನಾ ಸೋಂಕಿತರು ಬೇಗನೆ ಗುಣಮುಖರಾಗಬೇಕು. ಎಂಬ ಉದ್ದೇಶದಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಬಿಜೆಎಸ್ ಜೈನ್ ಸಂಘವು ಆಧುನಿಕ ಯಂತ್ರಗಳನ್ನು ನೀಡಿದೆ ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಳಿಕ ರಾಯಚೂರು ರಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ಹೆಚ್.ಎ .ನಾಡಗೌಡ ಮಾತನಾಡಿದರು. ಕೊರೋನಾ ಲಾಕ್ ಡೌನ್ ಸಂಕಷ್ಟದಲ್ಲಿ ಸಮಯದಲ್ಲಿ ಕ್ಷೇತ್ರದ ಶಾಸಕರಾದ ಕೆ.ಶಿವನಗೌಡ ನಾಯಕ ಅವರು ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಬಡ ಜನರ ಹಸಿವು ನಿಗಿಸಲು ಅನ್ನ ದಾಸೋಹ ಕೇಂದ್ರ ಆರಂಭಿಸಿದ್ದಾರೆ. ಅಲ್ಲದೆ ತಾಲ್ಲೂಕಿಗೆ ಅತ್ಯಾಧುನಿಕ ಆಕ್ಸಿಜನ್ ಯಂತ್ರಗಳ ಕಿಟ್‌ಗಳನ್ನು ನೀಡಲು ಜೈನ್ ಸಂಘಕ್ಕೆ ಶಿಫಾರಸ್ಸು ಮಾಡಿದ್ದರು ಅದರ ಫಲವಾಗಿ ಅರಕೇರಾದಲ್ಲಿ ಕೊರೋನಾ ಸೋಂಕು ತಗುಲಿದ ಬಡ ರೋಗಿಗಳಿಗೆ ಆಕ್ಸಿಜನ್ ಸಮಸ್ಯೆ ಉಂಟಾದಂತೆ ಮೂರು ಆಕ್ಸಿಜನ್ ಯಂತ್ರಗಳನ್ನು ನೀಡಿದ್ದಾರೆ.
ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ನಮ್ಮ ಖಾಸಗಿ ಆಸ್ಪತ್ರೆಗೂ ಕೂಡ ಅಂಬ್ಯುಲೇನ್ಸ್ ನೀಡುವ ಭರವಸೆ ನೀಡಿದ್ದಾರೆ ಕೆಲವೇ ದಿನಗಳಲ್ಲಿ ಅಂಬ್ಯುಲೇನ್ಸ್ ಬರಲಿದೆ ಎಂದು ಹೇಳಿದರು.
ಈ ವೇಳೆ ಡಾ.ಶಿವುಕುಮಾರನಾಡಗೌಡ ಡಾ.ರಾಘವೇಂದ್ರ ವಡಿಗೇರಾ ಜಾವೀದ್ ಆರ್.ಚಿಂಚೋಳಿಕರ್, ಡಾ.ಸಂಜಯ್ ಆರ್ ಭಾವಿಕಟ್ಟಿ, ಡಾ.ಭಾರತಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶಿವಕುಮಾರ ನಾರ ,ಬಸನಗೌಡ ನಾಡಗೌಡ, ಗ್ರಾಪಂ ಉಪಾಧ್ಯಕ್ಷ ಸಿದ್ದಪ್ಪ ಪೈಕಾರ, ಕೆ.ಭಗವಂತ್ರಾಯ ನಾಯಕ, ಶ್ರೀಕಾಂತ ನಾಯಕ ಜಲ್ಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.