ಜೈನ್ ಸಂಘಟನೆ : ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಕೆ – ಸಂಸದ ಉದ್ಘಾಟನೆ

ರಾಯಚೂರು.ಮೇ.೩೧- ಕೊರೊನಾ ಮಹಾಮಾರಿಯ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಡಳಿತಕ್ಕೆ ಜೊತೆಯಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಜೈನ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಸಂಸದ ರಾಜಾ ಅಮರೇಶ್ವರ ನಾಯಕ್ ಅವರು ಹೇಳಿದರು.
ಅವರಿಂದು ನಗರದ ಜೈನ್ ಮಂದಿರ ಸಭಾಗಣದಲ್ಲಿ ಭಾರತೀಯ ಜೈನ್ ಸಂಘಟನಾ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ನ್ನು ಪ್ರತಿ ತಾಲೂಕು ಕೇಂದ್ರದ ಹಳ್ಳಿಗಳಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಯಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಮಾತನಾಡುತ್ತಾ, ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಜನರು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಕೊರೊನಾ ಮೊದಲನೇ ಅಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಅದೇ ರೀತಿ ಎರಡನೇ ಅಲೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆ ಮಾಡಲು ಜಿಲ್ಲಾಡಳಿತ ಅಗಲು,ರಾತ್ರಿಯನ್ನದೆ ಕಾರ್ಯ ನಿವಾಹಿಸುತ್ತಿದ್ದು, ಮುಖ್ಯವಾಗಿ ಜಿಲ್ಲಾಧಿಕಾರಿಗಳು ಪ್ರತಿ ದಿನ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿಯನ್ನು ತಿಳಿದು ಕೊಳ್ಳುತ್ತಿದ್ದಾರೆ.
ಈ ಕೊರೊನಾ ಸೋಂಕು ತಡೆಗಟ್ಟಲು ಎಲ್ಲರೂ ಹೋರಾಟ ಮಾಡಬೇಕು. ಅದರಂತೆ ಭಾರತೀಯ ಜೈನ್ ಸಂಘಟನೆ ಸಂಸ್ಥೆಯು ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಇಂದು ಪ್ರತಿ ತಾಲೂಕಿನ ಹಳ್ಳಿಗಳಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ವಿತರಿಸುತ್ತದ್ದಾರೆ ಎಂದು ಹೇಳಿದರು.
ನಂತರ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ಅವರು ಮಾತನಾಡುತ್ತಾ, ಭಾರತೀಯ ಜೈನ್ ಸಮಾಜದ ವತಿಯಿಂದ ಜಿಲ್ಲೆಯ ೭ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಆಕ್ಸಿಜನ್ ಕಾನ್ಸಂಟ್ರೇಟರ್ ತಲುಪಿಸುವ ಕಾರ್ಯ ಮಾಡುತ್ತಿದ್ದು ವಿಶೇಷವಾಗಿದೆ.
ಕಳೆದ ೧೫ ದಿನಗಳಿಂದ ಕೊರೊನಾದಿಂದ ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಮಸ್ಯೆ ಎದುಗಾಗಿದ್ದು, ಆದರೆ ಇಂದು ಸುಮಾರು ೩೦ ರಿಂದ ೩೫ ರಷ್ಟು ಹಾಸಿಗೆಗಳು ಖಾಲಿ ಇವೆ. ಭಾರತೀಯ ಜೈನ್ ಸಂಘಟನೆಯು ಜಿಲ್ಲಾಡಳಿತದ ಜೊತೆಗೂಡಿ ಕೆಲಸ ಮಾಡುತಿದೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಕಮಲ್ ಸೇಠ್, ಮುಜುಬುದ್ದಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.