ಜೈನ್ ಸಂಘಟನೆಯಿಂದ 20 ಆಮ್ಲಜನಕ ಕಾನ್ಸಂಟ್ಟ್ರೇಟರ್ಸ್ ಪೂರೈಕೆ

ಕಲಬುರಗಿ.ಜೂ.04: ಕೋವಿಡ್ ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಸ್ಥಳೀಯ ಭಾರತೀಯ ಜೈನ್ ಸಂಘಟನೆಯು ಸಿಂಗಪೂರದಿಂದ ಆಮದು ಮಾಡಿಕೊಂಡಿರುವ 20 ಆಮ್ಲಜನಕ ಕಾನ್ಸಂಟ್ರೇಟರ್ಸ್‍ಗಳನ್ನು ಪೂರೈಕೆ ಮಾಡಲಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ಸಮ್ಮುಖದಲ್ಲಿ ಸಿಂಗಪುರದಿಂದ ಆಮದು ಮಾಡಿಕೊಂಡ 20 ಆಮ್ಲಜನಕ ಕಾನ್ಸ್‍ಂಟ್ರೇಟರ್ಸ್‍ಗಳನ್ನು ಶುಕ್ರವಾರ ಸ್ವೀಕರಿಸಿದರು.
ಈಗಾಗಲೇ ಭಾರತೀಯ ಜೈನ್ ಸಂಘಟನೆಯು 14 ಜನ ಫಲಾನುಭವಿಗಳಿಗೆ ಆಮ್ಲಜನಕ ಪೂರೈಕೆ ಯಂತ್ರಗಳನ್ನು ಪೂರೈಸಿದೆ. ಇನ್ನೂ ಹೆಚ್ಚುವರಿ ಅಮ್ಲಜನಕ ಪೂರೈಕೆ ಯಂತ್ರಗಳನ್ನು ಪೂರೈಸಲು ಸಂಘಟನೆಯು ಉದ್ದೇಶ ಹೊಂದಿದ್ದು, ಅಗತ್ಯವಿದ್ದಲ್ಲಿ ಮೊಬೈಲ್ ನಂಬರ್ 9742991143ಗೆ ಸಂಪರ್ಕಿಸಲು ಕೋರಿದ್ದಾರೆ.
ಭಾರತೀಯ ಜೈನ್ ಸಂಘಟನೆಯು ಈ ಹಿಂದೆ ಕಳೆದ ಏಪ್ರಿಲ್ 27ರಂದು 30 ಬಾಟಲಿ ರಕ್ತವನ್ನು ಸಂಗ್ರಹಿಸಿತ್ತು. ಅದೇ ರೀತಿ ಸುಮಾರು 160 ಜನರು ಲಸಿಕೆಯನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನೂ ಸಹ ಕಲ್ಪಿಸಿತ್ತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಪ್ರೀತಮ್ ಮೆಹತಾ, ಜಿಲ್ಲಧ್ಯಕ್ಷ ಸಿ.ಎ. ಸುನೀಲ್ ಲೋಧಾ, ಕಾರ್ಯದರ್ಶಿ ಅಭಿಜಿತ್ ಶಹಾ, ಚಂದ್ರಮೋಹನ್ ಶಹಾ, ಲಾಲ್‍ಚಂದ್ ಜೈನ್, ನಾಗನಾಥ್ ಚಿಂದೆ, ಅಂಕುಶ್ ಶಹಾ, ಹಸ್ತಿಮಹಲ್ ಸಿಂಗಾವಿ, ರಮೇಶ್ ಗಡಗಡೆ ಮುಂತಾದವರು ಉಪಸ್ಥಿತರಿದ್ದರು.