ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.04: ಜೈನ್ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ಸ್ಥಳೀಯ ಮೇನ್ ಬಜಾರದಲ್ಲಿ ಮಹಾವೀರ ವರ್ಣರಂಚಿತ ಭಾವಚಿತ್ರಕ್ಕೆ ಪುಷ್ಪ ಅಲಂಕಾರವನ್ನು ಮಾಡಿ ಶ್ವೆತಾಂಬರ, ದಿಗಂಬರ ಸಂಘಟನೆಗಳು ಪುರುಷ ಹಾಗೂ ಮಹಿಳೆಯರು ಗೀತಗಾಯನದೊಂದಿಗೆ ಮೆರವಣಿಗೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಭಾವಚಿತ್ರ, ಅವರ ಶಾಂತಿ, ಅಹಿಂಸೆಯ ಸಂದೇಶ ಸಾರುವ ಚಿತ್ರಾವಳಿ ಹಾಗೂ ಮಹಿಳೆಯ ರಿಂದು ಗುಲಾಭಿ ವಸ್ತ್ರಗಳು, ಪುರುಷರು ಶ್ವೇತ ವಸ್ತ್ರಗಳೊಂದಿಗೆ ಸಾಂಪ್ರದಾಯಿಕ ಮೇಳಗಳಿಗೆ ತಕ್ಕಂತೆ ಹೆಚ್ಚೆನಾದಗಳನ್ನು ಹಾಕುವ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.