ಜೈನ್ ಶ್ವೇತಾಂಬರ ಸಮಾಜದಿಂದ ಪೊಲೀಸರು,ಗೃಹರಕ್ಷಕ ಸಿಬ್ಬಂದಿಗೆ ಹೊಳಿಗೆ ಭೋಜನ

ಮುದ್ದೇಬಿಹಾಳ;ಮೇ.26: ಮುದ್ದೇಬಿಹಾಳ ಪಟ್ಟಣದ ಜೈನ್ ಶ್ವೇತಾಂಬರ ಸಮಾಜದಿಂದ ಪೂಲೀಸ್ ಠಾಣೆಯಲ್ಲಿ , ಆರಕ್ಷಕರಿಗೆ ಮತ್ತು ಗೃಹ ರಕ್ಷಕ ಸಿಬ್ಬಂದಿಗಳಿಗೆ ಹೂಳಿಗೆಯ ಸಿಹಿ ಭೋಜನ ಉಣ ಬಡಿಸಿದರು

ಕರೋನದ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಪೂಲೀಸರು ಹಾಗೂ ಗೃಹ ರಕ್ಷಕ ಸಿಬ್ಬಂದಿಗಳಿಗೆ ತಾಲೂಕು ಜೈನ್ ಶ್ವೇತಾಂಬರ ಸಮಾಜದಿಂದ ಹೂಳಿಗೆಯ ಪಟ್ಟಣದ ಠಾಣೆಯಲ್ಲಿ ಊಟವನ್ನು ಏರ್ಪಸಿದ್ದರು ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಹಾಗೂ ಬಿಜೆಪಿ ನಾಯಕ ವಿಕ್ರಮ್ ಓಸ್ವಾಲ್ ಪೂಲೀಸರು ಕರೋನದ ಸಂದರ್ಭದಲ್ಲಿ ಹಗಲಿರುಳು ಬಿಸಿಲು ಮನೆಯಲ್ಲಿ ನಿಂತು ತಮ್ಮ ಕರ್ತವ್ಯ ನಿರ್ವಹಿಸುತ್ತ ಜನರನ್ನು ಅನವಶ್ಯಕವಾಗಿ ಆಚೆ ತಿರುಗಾಡದಂತೆ ನಿಭಾಯಿಸುತ್ತಿದ್ದಾರೆ ಅವರ ಈ ಸೇವೆಗೆ ಮತ್ತು ಅವರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಜೈನ್ ಸಮಾಜದಿಂದ ಸಿಹಿ ಭೋಜನದ ವ್ಯವಸ್ಥೆ ಮಾಡಿದ್ದೇವೆ ,ಪೂಲೀಸರ ಭಯದಿಂದ ಕೆಲವು ಜನರು ಮಾಸ್ಕ್ ಧರಿಸುವುದು ಮತ್ತು ಆಚೆ ಅನವಶ್ಯಕವಾಗಿ ತಿರುಗಾಡುತ್ತಿಲ್ಲ .ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿ ಅರಿತು ಕರೋನದ ಎರಡನೇ ಅಲೆಯ ಭೀಕರತೆಯನ್ನು ಅರಿತು ಮನೆಯಲ್ಲಿ ಇರಬೇಕು ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ವ್ಯಾಕ್ಸಿನ್ ಹಾಕಿಸಿಕೂಳ್ಳಬೇಕು ಹಾಗೂ ನಿಮ್ಮಿಂದಾಗುವ ಸಹಾಯವನ್ನು ಕಷ್ಟದಲ್ಲಿ ಇರುವವರಿಗೆ ಮಾಡಬೇಕು ಎಂದರು

ಈ ವೇಳೆ ಪಿಎಸೈ ಎಂ ಬಿ.ಬಿರಾದಾರ ಮಾತನಾಡಿ ಜೈನ್ ಸಮಾಜದರು ಪ್ರೀತಿಯಿಂದ ಸಿಹಿ ಭೋಜನವನ್ನು ಮಾಡಿಕೊಂಡು ನಮಗೆ ಅತಿ ರುಚಿಕರ ಭಕ್ಷ್ಯಗಳನ್ನು ಉಣಬಡಿಸಿದ್ದಾರೆ,ಆರಕ್ಷಕರನ್ನು ಪೆÇ್ರೀತ್ಸಾಹಿಸುವ ಅವರ ಕಾರ್ಯ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ ಎಂದರು ಈ ಸಂದರ್ಭದಲ್ಲಿ

ಸಿಪಿಐ ಆನಂದ ವಾಗ್ಮೋಡೆ ,ಪೂಲೀಸರು ಸಿಬ್ಬಂದಿಗಳು ,ಗೃಹರಕ್ಷಕ ಸಿಬ್ಬಂದಿಗಳು ಭೋಜನವನ್ನು ಸವಿದರು

ಸಿಪಿಐ.ಆನಂದ ವಾಗ್ಮೋಡೆ ಹಾಗೂ ಪಿಎಸೈ ಎಂ.ಬಿ ಬಿರಾದಾರ ಅವರಿಗೆ ಜೈನ್ ಸಮಾಜದಿಂದ ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಜೈನ್ ಸಮಾಜದ ಮಹೇಂದ್ರ ಓಸ್ವಾಲ್, ಜಯೇಶ್ ಓಸ್ವಾಲ್, ಜಿತೇಂದ್ರ ಓಸ್ವಾಲ್, ಮುಖೇಶ್ ಓಸ್ವಾಲ್, ಸಿದ್ದಾರ್ಥ ಓಸ್ವಾಲ್, ಶ್ರೇಣಿಕ ಓಸ್ವಾಲ್, ಪಾರಸ್ ಪೂರವಾಲ್ ,ಹೀರಾಚಂದ ಓಸ್ವಾಲ್ ಮತ್ತು ಆಯುಷ್ ಓಸ್ವಾಲ್ ಹಾಗೂ ಜೈನ್ ಶ್ವೇತಾಂಬರ ಸಮಾಜದ ಯುವಕರು ಉಪಸ್ಥಿತರಿದ್ದರು