ದಾವಣಗೆರೆ. ಜೂ.14; ನಗರದ ಜೈನ್ ವಿದ್ಯಾಲಯದ ಸಿ.ಬಿ.ಎಸ್.ಇ. ಮತ್ತು ಸ್ಟೇಟ್ ವಿಭಾಗದ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪರಿಸರ ಜಾಗೃತಿಯ ಧ್ಯೇಯ ವಾಕ್ಯಗಳ ಫಲಕಗಳನ್ನು ಹಿಡಿದು ಜಾತಾ ನಡೆಸಿದರು. ಶಾಲೆಯ ಅಧ್ಯಕ್ಷರಾದ ರಮೇಶಕುಮಾರ್ ಹೆಚ್. ಕಾರ್ಯದರ್ಶಿಗಳಾದ ರಮೇಶಕುಮಾರ್ ಜೆ. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಹಾಗೂ ಹಸಿರು ಬಾವುಟ ತೋರಿಸುವ ಮೂಲಕ ಜಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಕಾರ್ಯದರ್ಶಿಗಳು ಜಾಗತಿಕ ತಾಪಮಾನವನ್ನು ತಡೆಗಟ್ಟಬೇಕಾದರೆ ಅದು ಕೇವಲ ಗಿಡ ಮರಗಳಿಂದ ಮಾತ್ರ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರುಗಳು, ಪ್ರಾಂಶುಪಾಲರು, ಆಡಳಿತಾದಿಕಾರಿಗಳು ಹಾಗೂ ಶಿಕ್ಷಕ ವರ್ಗದವರು ಭಾಗವಹಿಸಿದ್ದರು.