ಜೈನ್ ಫೌಂಡೇಶನ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ

ವಿಜಯಪುರ, ಎ.29-ನಗರದ ಸೋಲಾಪೂರ ರಸ್ತೆಯ ಜೈನ್ ಕಾಲೇಜ್‍ನ್ನು ಈ ಹಿಂದೆ ಕೋವಿಡ್ ಕೇರ್ ಸೆಂಟರ್‍ನ್ನಾಗಿ ಮಾಡಿದ್ದು, ಕಾಲಿ ಇದ್ದ ಅದನ್ನು ಸಿದ್ಧೇಶ್ವರ ಸಂಸ್ಥೆ ವಿಜಯಪುರ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರ ಹಾಗೂ ಜೈನ್ ಫೌಂಡೇಶನ್ ಸಹಭಾಗಿತ್ವದಲ್ಲಿ ಕಟ್ಟಡವನ್ನು ಪಡೆದುಕೊಂಡು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರವರು ಕೋವಿಡ್ ಕೇರ್ ಸೆಂಟರ್ (ಕೋವಿಡ್ ಕಾಳಜಿ ಕೇಂದ್ರ) ವನ್ನಾಗಿ ಪರಿವರ್ತಿಸಿ ಅದನ್ನು ನಗರದ ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟು ಅಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಇದೇ ಶುಕ್ರವಾರದಿಂದ ಕಾರ್ಯಾರಂಭಗೊಳ್ಳಲಿದ್ದು ಸದರಿ ಆಸ್ಪತ್ರೆಯಲ್ಲಿ ಸುಸಜ್ಜಿತವಾಗಿ ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಕಾಟು ಮತ್ತು ಬೆಡ್‍ಗಳನ್ನು ಹಾಕಲಾಗಿದೆ ಅದೇ ರೀತಿ ಸಿದ್ಧರಿಸಿ ಸೌಹಾರ್ದ ಸಹಕಾರಿ ವತಿಯಿಂದ ಬರುವ ಎಲ್ಲ ರೋಗಿಗಳಿಗೆ ಬೆಳಿಗ್ಗಿನ ಉಪಹಾರ, ಮದ್ಯಾಹ್ನದ ಊಟ ಸಾಯಂಕಾಲದ ಚಹಾ ಬಿಸ್ಕೇಟ್ ಮತ್ತು ರಾತ್ರಿ ಹೊತ್ತಿನ ಊಟ ಮತ್ತು ಹಣ್ಣು ಹಂಪಲಗಳ ವಿತರಣೆ ವ್ಯವಸ್ಥೆಯನ್ನು ಸಿದ್ಧರಿಸಿ ಸೌಹಾರ್ದ ಸಹಕಾರಿ ವತಿಯಿಂದ ಕೈಗೊಳ್ಳಲಾಗಿದೆ.
ಈ ಕಾರ್ಯಕ್ಕೆ ಕಟ್ಟಡವನ್ನು ನೀಡಿದ ಶಾಂತಿಲಾಲ್ ಜೈನ್ ರವರು ತಮ್ಮ ಜೈನ್ ಫೌಂಡೇಶನ್ ವತಿಯಿಂದ ಕಟ್ಟಡವನ್ನು ನೀಡಿ ಸಹಕಾರವನ್ನು ನೀಡುರುತ್ತಾರೆ ಈ ಮೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿದ ನಗರ ಶಾಸಕ ಶ್ರೀ ಬಸನಗೌಡ ರಾ ಪಾಟೀಲ ಯತ್ನಾಳರವರು ಈ ಕೋವಿಡ್ ಕೇರ್ ಸೆಂಟರ್‍ಗೆ ಬರುವ ರೋಗಿಗಳಿಗೆ ವಾಹನ ವ್ಯವಸ್ಥೆಯ ಜೊತೆಗೆ ನುರಿತ ವೈದ್ಯಕೀಯ ಸಿಬ್ಬಂಧಿಗಳನ್ನು ಅಲ್ಲಿ ವ್ಯವಸ್ಥೆಗೊಳಿಸಿರುತ್ತಾರೆ. ನಗರದಲ್ಲಿ ಹೆಚ್ಚಾಗುವ ರೋಗಿಗಳ ಸಂಖ್ಯೆಗನುಗುಣವಾಗಿ ಇಲ್ಲಿ ಕೆಳಮಟ್ಟದ ಪ್ಲೋರ್ ನಲ್ಲಿ (ಗ್ರೌಂಡ್ ಪ್ಲೋರ್) ಆಕ್ಷಿಜನ್ ವ್ಯವಸ್ಥೆಯನ್ನು ಸಹ ಕಲ್ಪಿಸಿರುತ್ತಾರೆ, ಸದರಿ ಆಕ್ಷಿಜನ್ ವ್ಯವಸ್ಥೆಯನ್ನು ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸೆಸ್ ಕೇಂದ್ರದವರು ನೋಡಿಕೊಳ್ಳುತ್ತಾರೆ.
ಕೋವಿಡ್ ಕೇರ್ ಸೆಂಟರ್ ಈಗಾಗಲೇ ಜಿಲ್ಲೆಯ ಆರೋಗ್ಯಾಧಿಕಾರಿಗಳೊಂದಿಗೆ ನಗರ ಶಾಸಕರು, ಸಿದ್ಧೇಶ್ವರ ಸಂಸ್ಥೆ ಚೇರಮನ್‍ರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರದ ಅಧಿಕಾರಿ ವರ್ಗದವರು ವೀಕ್ಷಿಸಿ ಅದನ್ನು ಅಂತಿಮಗೊಳಿಸಿ, ಸ್ವಚ್ಚಗೊಳಿಸಿ ಈಗಾಗಲೇ ಭರದಿಂದ ಸಿದ್ದತೆಯನ್ನು ಮಾಡುತ್ತಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್‍ನ್ನು ಮನಗೂಳಿ ರಸ್ತೆಯ ಬಸವ ಭವನದ ಬದಲಾಗಿ ಊರ ಹೊರಗಡೆ ಇರುವ ಈ ಜೈನ್ ಸಮುದಾಯದವರು ನೀಡಿದ ಕಟ್ಟಡದಲ್ಲಿ ಸ್ಥಳಾಂತರಿಸಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ವಿಜಯಪುರ ನಗರದ ಸೋಲಾಪೂರ ರಸ್ತೆಯ ಜೈನ್ ಕಾಲೇಜ್‍ನ್ನು ಈ ಹಿಂದೆ ಕೋವಿಡ್ ಕೇರ್ ಸೆಂಟರ್‍ನ್ನಾಗಿ ಮಾಡಿದ್ದು, ಕಾಲಿ ಇದ್ದ ಅದನ್ನು ಶ್ರೀ ಸಿದ್ಧೇಶ್ವರ ಸಂಸ್ಥೆ ವಿಜಯಪುರ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರ ಹಾಗೂ ಜೈನ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸದರಿ ಕಟ್ಟಡವನ್ನು ಪಡೆದುಕೊಂಡು ನಗರ ಶಾಸಕರಾದ ಶ್ರೀ ಬಸನಗೌಡ ರಾ ಪಾಟೀಲ ಯತ್ನಾಳರವರು ಕೋವಿಡ್ ಕೇರ್ ಸೆಂಟರ್ (ಕೋವಿಡ್ ಕಾಳಜಿ ಕೇಂದ್ರ) ವನ್ನಾಗಿ ಪರಿವರ್ತಿಸಿ ಅದನ್ನು ನಗರದ ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟು ಅಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಇದೇ ಶುಕ್ರವಾರದಿಂದ ಕಾರ್ಯಾರಂಭಗೊಳ್ಳಲಿದ್ದು ಸದರಿ ಆಸ್ಪತ್ರೆಯಲ್ಲಿ ಸುಸಜ್ಜಿತವಾಗಿ ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಕಾಟು ಮತ್ತು ಬೆಡ್‍ಗಳನ್ನು ಹಾಕಲಾಗಿದೆ ಅದೇ ರೀತಿ ಸಿದ್ಧರಿಸಿ ಸೌಹಾರ್ದ ಸಹಕಾರಿ ವತಿಯಿಂದ ಬರುವ ಎಲ್ಲ ರೋಗಿಗಳಿಗೆ ಬೆಳಿಗ್ಗಿನ ಉಪಹಾರ, ಮದ್ಯಾಹ್ನದ ಊಟ ಸಾಯಂಕಾಲದ ಚಹಾ ಬಿಸ್ಕೇಟ್ ಮತ್ತು ರಾತ್ರಿ ಹೊತ್ತಿನ ಊಟ ಮತ್ತು ಹಣ್ಣು ಹಂಪಲಗಳ ವಿತರಣೆ ವ್ಯವಸ್ಥೆಯನ್ನು ಸಿದ್ಧರಿಸಿ ಸೌಹಾರ್ದ ಸಹಕಾರಿ ವತಿಯಿಂದ ಕೈಗೊಳ್ಳಲಾಗಿದೆ.
ಈ ಕಾರ್ಯಕ್ಕೆ ಕಟ್ಟಡವನ್ನು ನೀಡಿದ ಶಾಂತಿಲಾಲ್ ಜೈನ್ ರವರು ತಮ್ಮ ಜೈನ್ ಫೌಂಡೇಶನ್ ವತಿಯಿಂದ ಕಟ್ಟಡವನ್ನು ನೀಡಿ ಸಹಕಾರವನ್ನು ನೀಡುರುತ್ತಾರೆ ಈ ಮೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿದ ನಗರ ಶಾಸಕ ಶ್ರೀ ಬಸನಗೌಡ ರಾ ಪಾಟೀಲ ಯತ್ನಾಳರವರು ಈ ಕೋವಿಡ್ ಕೇರ್ ಸೆಂಟರ್‍ಗೆ ಬರುವ ರೋಗಿಗಳಿಗೆ ವಾಹನ ವ್ಯವಸ್ಥೆಯ ಜೊತೆಗೆ ನುರಿತ ವೈದ್ಯಕೀಯ ಸಿಬ್ಬಂಧಿಗಳನ್ನು ಅಲ್ಲಿ ವ್ಯವಸ್ಥೆಗೊಳಿಸಿರುತ್ತಾರೆ. ನಗರದಲ್ಲಿ ಹೆಚ್ಚಾಗುವ ರೋಗಿಗಳ ಸಂಖ್ಯೆಗನುಗುಣವಾಗಿ ಇಲ್ಲಿ ಕೆಳಮಟ್ಟದ ಪ್ಲೋರ್ ನಲ್ಲಿ (ಗ್ರೌಂಡ್ ಪ್ಲೋರ್) ಆಕ್ಷಿಜನ್ ವ್ಯವಸ್ಥೆಯನ್ನು ಸಹ ಕಲ್ಪಿಸಿರುತ್ತಾರೆ, ಸದರಿ ಆಕ್ಷಿಜನ್ ವ್ಯವಸ್ಥೆಯನ್ನು ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸೆಸ್ ಕೇಂದ್ರದವರು ನೋಡಿಕೊಳ್ಳುತ್ತಾರೆ.
ಕೋವಿಡ್ ಕೇರ್ ಸೆಂಟರ್ ಈಗಾಗಲೇ ಜಿಲ್ಲೆಯ ಆರೋಗ್ಯಾಧಿಕಾರಿಗಳೊಂದಿಗೆ ನಗರ ಶಾಸಕರು, ಸಿದ್ಧೇಶ್ವರ ಸಂಸ್ಥೆ ಚೇರಮನ್‍ರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರದ ಅಧಿಕಾರಿ ವರ್ಗದವರು ವೀಕ್ಷಿಸಿ ಅದನ್ನು ಅಂತಿಮಗೊಳಿಸಿ, ಸ್ವಚ್ಚಗೊಳಿಸಿ ಈಗಾಗಲೇ ಭರದಿಂದ ಸಿದ್ದತೆಯನ್ನು ಮಾಡುತ್ತಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್‍ನ್ನು ಮನಗೂಳಿ ರಸ್ತೆಯ ಬಸವ ಭವನದ ಬದಲಾಗಿ ಊರ ಹೊರಗಡೆ ಇರುವ ಈ ಜೈನ್ ಸಮುದಾಯದವರು ನೀಡಿದ ಕಟ್ಟಡದಲ್ಲಿ ಸ್ಥಳಾಂತರಿಸಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.