ಜೈನ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ  ಓರಿಯೆಂಟೇಷನ್ ಕಾರ್ಯಕ್ರಮ

ದಾವಣಗೆರೆ. ಜು.೨೭; ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ  ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣೇಶ್ ಡಿ ಬಿ  ಅಧ್ಯಕ್ಷತೆ ವಹಿಸಿ  ಮಾತನಾಡಿ , ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಕುರಿತು ಮಾಹಿತಿ ನೀಡಿದರು. ಐಟಿ ಕ್ಷೇತ್ರದ  ವೃತ್ತಿ  ಸಲಹೆಗಾರ ಹಾಗೂ ಲೇಖಕರಾದ ಪ್ರಶಾಂತ್ ನಾಯಕ್  ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿ ಪ್ರೇರೇಪಿಸಿದರು. ಪ್ರೊ. ತನುಜಾ  ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರೊ. ಪ್ರಗತಿ  ಸ್ವಾಗತಿಸಿದರು  ಹಾಗೂ ಪ್ರೊ. ಗಣೇಶ್ ಎನ್ ವೈ  ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ  ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Attachments area