ಜೈನ್ ಕಾಲೇಜಿನಲ್ಲಿ ಕೌನ್ಸಿಲ್ ಸಂಘದ ಉದ್ಘಾಟನೆ


ದಾವಣಗೆರೆ.ನ.೧೧: ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಇನ್ನೋವೇಶನ್ ಕೌನ್ಸಿಲ್ ೪.೦ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಮೈಸೂರು ಜಿಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿ ಡಾ. ಬಿ.ಜಿ. ಸಂಗಮೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಪ್ರಾಂಶುಪಾಲ ಡಾ.ಡಿ.ಬಿ. ಗಣೇಶ್, ಐಐಸಿ ೪.೦ ಉಪಾಧ್ಯಕ್ಷ ಡಾ. ಎಸ್. ಮೌನೇಶಾಚಾರಿ ಸೇರಿದಂತೆ ಕಾಲೇಜಿನ ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು.