ಜೈನ್ ಕಾಲೇಜಿನಲ್ಲಿ ಉದ್ಯಮಶೀಲತೆಯ ಪ್ರೇರಕ ಚರ್ಚೆ


ದಾವಣಗೆರೆ.ನ.೩೦;  ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಇನ್ನೋವೇಶನ್ ಕೌನ್ಸಿಲ್  ಅಡಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳನ್ನು ಯಶಸ್ವಿ ಉದ್ಯಮಿಗಳಾಗಲು ಪ್ರೇರೇಪಿಸುವ ಸಲುವಾಗಿ ನನ್ನ ಕಥೆ ಎಂಬ ಶೀರ್ಷಿಕೆಯಡಿ ಪ್ರೇರಕ ಭಾಷಣವನ್ನು  ಕಾಲೇಜಿನ ಆಡಿಟೋರಿಯಂನಲ್ಲಿ  ಅಯೋಜಿಸಲಗಿತ್ತು. ಗೌರವ ಅತಿಥಿಯಾಗಿ ನಗರದ  ಉದ್ಯಮಿಯಾದ ಡಾ. ರವಿರಾಜ ಎಂ ಇ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣೇಶ್ ಡಿ ಬಿ, ಉಪಾಧ್ಯಕ್ಷರಾದ ಡಾ.ಮೌನೇಶಚಾರಿ ಎಸ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರಾಹುಲ್ ಪಾಟೀಲ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕ ಸಂಯೋಜಕರು  ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.