ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರ್ಯಾಜುಯೇಷನ್ ಡೇ

ದಾವಣಗೆರೆ.ಮಾ.೧೯: ವಿದ್ಯಾರ್ಥಿಗಳು ಎಷ್ಟೇ ಕಷ್ಟಗಳು ಎದುರಾದರೂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೇ ಮುಂದುವರೆಸುವ ಮೂಲಕ ಸಾಧನೆ ಮಾಡಿರಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟರರ್ ಡಾ. ಬಿ.ಇ ರಂಗಸ್ವಾಮಿ ತಿಳಿಸಿದರು.ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಶೈಕ್ಷಣಿಕ ವರ್ಷದ ಗ್ರ್ಯಾಜುಯೇಷನ್ ಡೇ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಂಡರೆ ಕೆಲಸ ಮಾಡಲು ಸುಲಭವಾಗುತ್ತದೆ. ಅಲ್ಲದೇ, ನಿಮ್ಮದೇ ತಂಡದೊಂದಿಗೆ ಒಬ್ಬರಿಗೊಬ್ಬರು ಸಹಾಯಮಾಡುತ್ತಾ ತಿಳಿದಿರುವುದನ್ನು ಮತ್ತೊಬ್ಬರಿಗೆ ಹಂಚುವುದರಿಂದ ನಿಮ್ಮ ಜ್ಞಾನವೂ ವೃದ್ಧಿಯಾಗುತ್ತದೆ. ಜತೆಗೆ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತದೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮುಲಕ ಯಶಸ್ಸು ನಿಮ್ಮ ದಾರಿಯಲ್ಲಿ ಬರುತ್ತದೆ ಹಾಗು ದೇಶದ ಅಭಿವೃದ್ದಿಗೆ ಇಂಜಿನಿಯರ್‌ಗಳ ಅವಶ್ಯಕತೆ ಸಾಕಷ್ಟಿದೆ ಎಂದರು.ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್ ಜೈನ್, ಹೆಚ್. ಗೌಡ್ರು ಬಸವರಾಜಪ್ಪ, ಡಾ. ಎಸ್.ಬಿ. ಮಲ್ಲುರ್, ಡಾ. ಮಧುಕೇಶ್ವರ, ಕಾರ್ಯಕ್ರಮದ ಸಂಚಾಲಕ ಡಾ. ಸಂತೋಷ್ ಹೇರೂರು, ಸಂಯೋಜಕರಾದ ಕೆ.ಇ. ರವಿಕುಮಾರ್ ಮತ್ತು ಸವಿತಾ ಮಮದಪುರ್ ಉಪಸ್ಥಿತರಿದ್ದರು.