ಜೈನಮುನಿ ಹತ್ಯೆ ಖಂಡಿಸಿ ಪ್ರತಿಭಟನೆ; ಪ್ರಕರಣ ಸಿಬಿಐಗೆ ನೀಡಲು ಆಗ್ರಹ

ವಿಜಯಪುರ: ಜು.14:ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದರು. ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಇಂದ್ರೇಶ ಜೈನ್, ನೇಮನಾಥ ಬಾಗೇವಾಡಿ ಕೇಸ ಮಂಡನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆ ವೇಳೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೈನಮುನಿಗಳ ಬರ್ಬರ ಹತ್ಯೆಯನ್ನು ಕೂಡಲೇ ಸಿಬಿಐಗೆ ನೀಡಿ, ಕೊಲೆ ಹಿಂದಿರುವ ಸತ್ಯಾಸತ್ಯತೆ ಬಯಲಿಗೆ ತರಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೈನ್ ಸಮುದಾಯದ ಶೀತಲಕುಮಾರ ರೂಗಿ, ಬರ್ಬರವಾಗಿ ಜೈನ್ ಮುನಿಗಳ ಹತ್ಯೆ ನಡೆದಿರುವುದು ಅತ್ಯಂತ ಹೇಯ ಕೃತ್ಯ. ಹಾದಿ ತಪ್ಪಿಸುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ನಡೆದಿದೆ. ಒತ್ತಾಯ ಮಾಡಿದಾಗ ಎರಡನೇ ಆರೋಪಿ ಹೆಸರು ಹೇಳಿರುವುದು ಸಂಶಯ ಹುಟ್ಟಿಸಿದೆ. ದಮ್ ಇದ್ದರೆ ಸಿಬಿಐಗೆ ಕೊಡಿ. ಸಾಧುವಿನ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜೈನ್ ಸಮುದಾಯ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ. ಅಹಿಂಸೆ ಸಂದೇಶ ಸಾರುವ ಮುನಿಗಳ ಹತ್ಯೆ ಖಂಡನೀಯ. ಅಖಂಡ ಹಿಂದೂ ಸಮಾಜ ಜೈನ್ ಸಮುದಾಯದ ಜೊತೆಗೆ ಇದೆ. ನ್ಯಾಯ ಕೊಡಿಸಲು ಹೋರಾಟ ನಡೆಸುತ್ತೆವೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ. ಹಿಂದಿನ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು. ದೊಡ್ಡ ಸ್ವಾಮೀಜಿಗಳಿಗೆ ರಕ್ಷಣೆ ಇಲ್ಲವೆಂದರೆ ಜನಸಾಮಾನ್ಯರ ಗತಿ ಏನು ಎಂಬ ಆತಂಕ ಕಾಡುತ್ತಿದೆ.
ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ಚಂದ್ರಶೇಖರ ಕವಟಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೇಮಿತಾನ ಬಾಗೇವಾಡಿ, ಇಂದ್ರೇಶ ಜೈನ್ ಕೇಶ ಮಂಡನೆ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಪ್ರಕಾಶ ಅಕ್ಕಲಕೋಟ, ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಜೈನ್ ಸಮುದಾಯದ ಶೀತಲಕುಮಾರ ರೂಗಿ, ಮಹಾವೀರ ಪಾರೇಖ್, ಪ್ರವೀಣ ಕಾಸರ, ಭರತ ಧನಶೆಟ್ಟಿ, ಸಮೀರ ಧನಶೆಟ್ಟ, ಬಸು ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಚಿದಾನಂದ ಚಲವಾದಿ, ಕಾಸುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ, ರಾಜಕುಮಾರ ಸಗಾಯಿ, ಸಾಯಬಣ್ಣ ಭೋವಿ, ಚಂದ್ರು ಚೌಧರಿ, ಎಂ.ಎಸ್.ಕರಡಿ, ರಾಜೇಶ ದೇವಗಿರಿ, ವಿಠ್ಠಲ ಹೊಸಪೇಟ, ಪ್ರೇಮಾನಂದ ಬಿರಾದಾರ, ಕಿರಣ ಪಾಟೀಲ, ಜವಾಹರ ಗೋಸಾಯಿ, ಮಲ್ಲಿಕಾರ್ಜುನ ಗಡಗಿ, ಅಶೋಕ ಬೆಲ್ಲದ, ಛಾಯಾ ಮಶಿಯವರ, ಮುಖಂಡರಾದ ಚಂದ್ರು ಚೌದರಿ, ಲಕ್ಷ್ಮಣ ಜಾಧವ, ದತ್ತಾ ಗೊಲಂಡೆ, ಲಕ್ಷ್ಮೀ ಕನ್ನೊಳ್ಳಿ, ರಾಜಲಕ್ಷ್ಮೀ ಪರತನವರ, ವಿಠ್ಠಲ ನಡುವಿನಕೇರಿ, ಉಮೇಶ ಕಾರಜೋಳ, ವಿಜಯ ಜೋಷಿ, ಶರಣು ಕಾಖಂಡಕಿ, ಮಾದೇವ ಯಾಳವಾರ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.