ಜೈನಮುನಿ ಹತ್ಯೆ ಖಂಡನೆ

ಇಂಡಿ :ಜು.11: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನ ಮಂದಿರದ ಮುನಿ ಆಚಾರ್ಯ ಕಾಮಕುಮಾರನಂದಿ ಮಹಾರಾಜರನ್ನು ಅಮಾನುಷ್ಯ ರೀತಿಯಲ್ಲಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಲಾಗಿದ್ದು, ಕೃತ್ಯ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಜೆಪಿ ಮುಖಂಡ ಹಣಮಂತ್ರಾಯಗೌಡ ಪಾಟೀಲ(ಅಂಜುಟಗಿ) ಹೇಳಿದರು.

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ಜೈನಮುನಿ ಮಹಾರಾಜರನ್ನು ಕೊಲೆ ಮಾಡಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು,ಆತ್ಮ ಕಲ್ಯಾಣಗೊಸ್ಕರ ಕಠಿಣ ವೃತ್‍ಗಳನ್ನು ಆಚರಿಸುವ ಆಧ್ಯಾತ್ಮಕ ಪ್ರವರ್ತಕರು ಆಗಿರುವ ಜೈನ ಮುನಿಗಳಿಗೆ ಹಿಂಥ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.ಹಿಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಜಾಗ್ರತ ವಹಿಸಬೇಕು ಎಂದು ಅವರು ಆಗ್ರಹಿಸಿದರು.