ಇಂಡಿ:ಜು.13: ಜೈನಧರ್ಮದ ಮುನಿ ಮಹಾರಾಜರ ವಿಕೃತ ಹತ್ಯೆ ಮಾಡಿರುವುದನ್ನು ಖಂಡಿಸಿ ಬುಧುವಾರ ಜೈನ ಸಮುದಾಯದ ಮುಖಂಡರು ಪಟ್ಟಣದ ಮಿನಿ ವಿಧಾನ ಸೌಧಾದಲ್ಲಿರುವ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಉಪವಿಭಾಗಾಧಿಕಾರಿ ಎ.ಸಿ ರಾಮಚಂದ್ರ ಗಡದೆಯವರ ಮೂಲಕ ಸರಕಾರಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬೆಳಗಾವ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಆಶ್ರಮದಲ್ಲಿ ವಾಸವಾಗಿದ್ದ ಜೈನಮುನಿ ಶ್ರೀ ಕಾಮಕುಮಾರನಂದಿ ಮಹಾರಾಜರನ್ನು ವಿಕೃತವಾಗಿ ಕೊಂದು ಹಾಕಿದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ವಿಶ್ವಕ್ಕೆ ಅಂಹಿಸಾ ಪರಮೋಧರ್ಮ ಎಂದು ಯನ್ನು ಇಡೀ ಜಗತ್ತಿನ ಮಾನವ ಕುಲಕೋಟಿಗೆ ಉದ್ದಾರ ಮಾಡುತ್ತಾ ಸರಳ,ಸಾದಾ ಜೀವನ ಸಾಗಿಸುವ ಮುನಿಗಳಿಗೆ ಸರಕಾರ ರಕ್ಷಣೆ ನೀಡಬೇಕು ಭಾರತ ಅನೇಕ ಸಾಧು ಸಂತರನ್ನು, ಮುನಿಗಳನ್ನು ಶರಣರನ್ನು ನೀಡಿದ ಪುಣ್ಯ ಭೂಮಿ ಇಂತಹ ಮಹಾನ್ ಸತ್ಪುರುಷರನ್ನು ವಿಕೃತವಾಗಿ ಕೊಂದು ಹಾಕಿದ ಆರೋಪಿಗಳಿಗೆ ಉಗ್ರಶಿಕ್ಷೆ ನೀಡಬೇಕು ಎಂದು ಜೈನಸಮುದಾಯ ಸರಕಾರಕ್ಕೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜೈನ ಸಮುದಾಯದ ಅಧ್ಯಕ್ಷ ಅಜೀತ ಧನಶೆಟ್ಟಿ, ಸನತಕುಮಾರ ಹಳ್ಳಿ, ಶೀತಲ ಧನಶೆಟ್ಟಿ, ಸಂತೋಷ ಕೋಟಿ, ಶ್ರೀಕಾಂತ ದುರ್ಗಿ, ಮಹಾವೀರ ವರ್ಧಮಾನ, ಶಾಂತಿಲಾಲ ಧನಶ್ರೀ, ಅಶೋಕ ಧಮಪಾಲ, ಪ್ರದೀಪ ಧನಶೇಟ್ಟಿ, ಪ್ರಕಾಶ ಧನಶೆಟ್ಟಿ, ರಮೇಶ ಜೈನ,ಶಶೀಕಾಂತ ಶೆಟಗಾರ, ತೀರ್ಥರಾಜ ಅಗರಖೇಡ, ಅಜೀತ ದೋಶಿ, ನಿರಂಜನ ಶಹಾ, ಕೇತನ ಮುನಸಿ, ದೇವೇಂದ್ರ ಹಳ್ಳಿ ಸೇರಿದಂತೆ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.