ಜೈನಮುನಿ-ಯುವ ಬ್ರಿಗೇಡ್ ಮುಖಂಡನ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ

ಕಾಳಗಿ.ಜು.12:ಟಿ. ನರಸಿಂಹಪೂರ ಗ್ರಾಮದಲ್ಲಿ ಹತ್ಯೆಗೈದ ವೇಣುಗೋಪಾಲ ಯುವ ಬ್ರಿಗೇಡ್ ಮುಖಂಡರನ್ನು ಮತ್ತು ಜೈನ ಮುನಿಗಳ ಹತ್ಯೆ ಮಾಡಿದ ಆರೋಪಿಗಳನ್ನು ಹಿಡಿದು ಗಲ್ಲು ವಿಧಿಸಿ ಮೃತರ ಕುಟುಂಬದ ಹೊಣೆ ಸರಕಾರ ಹೊರಬೇಕು ಎಂದು ತಾಲೂಕು ರಾಮ ಸೇನಾ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಮ ಸೇನಾ ತಾಲೂಕ ಅಧ್ಯಕ್ಷ ಕಾಳಪ್ಪ ಕರೆಮನೋರ ಟಿ. ನರಸಿಂಹಪೂರ ಗ್ರಾಮದಲ್ಲಿ ಮೋಸದಿಂದ ಕರೆದೋಯ್ದು ಯುವ ಬ್ರಿಗೇಡ್ ಮುಖಂಡರಾದ ವೇಣುಗೋಪಾಲ ರವರಿಗೆ ಹತ್ಯೆ ಮಾಡಿರುವದನ್ನು ಇಡೀ ಕರ್ನಾಟಕವೇ ಖಂಡಿಸುತ್ತದೆ. ಅದರಂತೆ ಜೈನ ಮುನಿಗಳಿಗೆ ದುಷ್ಕರ್ಮಿಗಳು ಹಲ್ಲೆ ಮಾಡಿ ಹತ್ಯೆ ಮಾಡಿರುವ ಆರೋಪಿಗಳಿಗೆ ಕೂಡಲೇ ಬಂದಿಸಿ ಮುಂದೆ ಅವರಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕೆಂದು ರಾಮ ಸೇನಾ ಒತ್ತಾಯಿಸಯಾಯಿತು. ಒಂದು ವೇಳೆ ಮುಂದೆ ಸದರಿ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ನೀಡದೆ ಹೋದಲ್ಲಿ ಕರ್ನಾಟಕದ್ಯಂತಹ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ವಿಜಯಕುಮಾರ ಚೆಂಗಟಾ, ಸೋಮಶೇಖರ ಮಾಕಪನೋರ, ರಾಜೇಂದ್ರಬಾಬು ಹೀರಾಪುರ, ರೇವನಸಿದ್ದಪ್ಪ ತೇಗಲತಿಪ್ಪಿ, ಹೇಮಂತ ಜಾಧವ, ಅಜೇಯ ಮಹೇಂದ್ರಕರ್, ರಾಜು ದಂಡೊತಿಕರ್, ಶಿವಕುಮಾರ ಟೆಂಗಳಿ, ಭಾಗೇಶ ಚಂದನಕೇರ ಸೇರಿದಂತೆ ಅನೇಕರಿದ್ದರು.