ಜೈಕನ್ನಡಿಗರ ಸೇನೆ ದಿನದರ್ಶಿಕೆ ಬಿಡುಗಡೆ: ಕೊರೊನಾ ವಾರಿಯರ್ಸರ ಸನ್ಮಾನ

ಕಲಬುರಗಿ,ಡಿ.31- ನಾಡಿನ ನೆಲಜನ ಮತ್ತು ನಾಡು ನುಡಿಯ ರಕ್ಷಣೆಯಲ್ಲಿ ಕನ್ನಡಪರ ಸಂಘಟನೆಗಳ ಕೊಡುಗೆ ಅಪಾರವಾಗಿದೆ ಎಂದು ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ಹೇಳಿದರು.
ನಗಗರದ ಕನ್ನಡ ಭವನದಲ್ಲಿ ಜೈಕನ್ನಡಿಗರ ಸೇನೆ ಆಯೋಜಿಸಿದ್ದ ಸೇನೆಯ ನೂತನ 2021ನೇ ವರ್ಷದ ದಿನದರ್ಶಿಕೆ ಬಿಡುಗಡೆ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೊನಾ ವಾರಿಯರ್ಸ ಅವರನ್ನು ಪ್ರೋತ್ಸಹಿಸಿ ಅವರ ಸೇವೆಗೆ ಮತ್ತಷ್ಟು ಬಲವನ್ನು ನೀಡುವ ಉದ್ದೇಶದಿಂದ ಅವರನ್ನು ಸನ್ಮಾನಿಸಿ ಗೌರವಿಸುವ ಕೆಲಸ ಮಾಡುತ್ತಿರುವ ಜೈಕನ್ನಡಿಗರ ಸೇನೆಯ ಕೆಲಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಚಲೇರಾ ಮಠದ ಪೂಜ್ಯ ಬಸವರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮಕ್ಕೆ ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ ಮತ್ತು ಜಿಪಂ ಸದಸ್ಯ ದಿಲೀಪ ಪಾಟೀಲ ಅವರು ಜಂಟಿಯಾಗಿ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ, ಲಿಂಗರಾಜ ಸಿರಗಾಪೂರ ಪಾಲ್ಗೊಂಡಿದ್ದರು. ಜೈಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಡಾ.ಶರಣಪ್ಪ ಬಿ.ಕಾಮರೆಡ್ಡಿ ಮತ್ತು ಚಾಮರಾಜ ಲಕ್ಷ್ಮಣ ದೊಡ್ಮನಿ ಹಾಗೂ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರನ್ನು ಹಾಗೂ ಆರೋಗ್ಯ ಇಲಾಕೆಯ ಸಿಬ್ಬಂದಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.